ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರ್ಯಾಕ್ಟರ್ ಪರೇಡ್ ಮಾಡೋಕೆ ಅವಕಾಶ ಇಲ್ಲ: ಕಮಲ್ ಪಂತ್

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಹಲವಾರು ರೈತಪರ ಸಂಘಟನೆಗಳು ನಾಳೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ಹಮ್ಮಿಕೊಂಡಿದ್ದಾರೆ. ಆದ್ರೆ ಸಂಚಾರ ದಟ್ಟಣೆಗೆ ಸಮಸ್ಯೆ ಉಂಟಾಗಬಹುದಾದ ಕಾರಣಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ಅನುಮತಿ ನೀಡಲು ನಿರಾಕರಿಸಿದ್ದಾರೆ. ಟ್ರ್ಯಾಕ್ಟರ್ ಪರೇಡ್ ಹೊರತಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ ಕಮಲ್ ಪಂತ್, ನಾಳೆ ಗಣರಾಜ್ಯೋತ್ಸವ ಬಂದೋಬಸ್ತ್ ಜೊತೆಗೆ ರೈತರ ಪ್ರತಿಭಟನೆಗೂ ಪೊಲೀಸರನ್ನು ನಿಯೋಜಿಸಬೇಕಿದೆ. ಟ್ರ್ಯಾಕ್ಟರ್ ಮೂಲಕ ಪ್ರತಿಭಟಿಸಿದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಈ ದಿಸೆಯಲ್ಲಿ‌ ರೈತ ಪರ ಸಂಘಟನೆಗಳು ಶಾಂತಿಯುತ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಿಕೊಳ್ಳಬೇಕಿದೆ.

ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ ಅವರನ್ನು ನಗರದೊಳಗೆ ಪ್ರವೇಶಿಸಲು ನಿರಾಕರಿಸಲಾಗುತ್ತದೆ. ಸಾಂಕೇತಿಕವಾಗಿಯೂ ಟ್ರ್ಯಾಕ್ಟರ್​ನಲ್ಲಿ ಪ್ರತಿಭಟನೆ ಮಾಡಕೂಡದು‌ ಎಂದು ಹೇಳಿದ್ರು. ಈ ಹಿಂದೆ ಎಂದೂ ಟ್ರ್ಯಾಕ್ಟರ್​ನಲ್ಲಿ ನಗರದಲ್ಲಿ ಯಾವುದೇ ಪ್ರತಿಭಟನೆ‌ ನಡೆದಿಲ್ಲ. ಬಸ್ಸು, ಬೈಕ್, ಕಾರು ಹಾಗೂ ಜೀಪ್​ಗಳಲ್ಲಿ ಬಂದು ಪ್ರತಿಭಟನೆ ನಡೆಸಲು ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ‌.

Edited By : Nagaraj Tulugeri
PublicNext

PublicNext

25/01/2021 05:59 pm

Cinque Terre

61.69 K

Cinque Terre

7

ಸಂಬಂಧಿತ ಸುದ್ದಿ