ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯಾಯಾಲಯದ ಆವರಣದಲ್ಲೇ ಪತ್ನಿಗೆ ತಲಾಖ್​ ನೀಡಿದ ಭೂಪ!

ಲಕ್ನೋ: ತ್ರಿವಳಿ ತಲಾಖ್ ಕಾನೂನು ಬಾಹಿರವಾಗಿದ್ದರೂ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿಗೆ ತಲಾಖ್​ ನೀಡಿದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

ಅಜೀಂ ನಗರ ನಿವಾಸಿ ಶಯರೂಲ್​​ ಹಾಗೂ ತಾಂಡಾ ನಿವಾಸಿ ಅನೀಶ್ ಮದುವೆಯಾಗಿದ್ದರು. ಆದರೆ ಕೆಲವು ದಿನಗಳ ನಂತರ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಲಾರಂಭಿಸಿದ್ದಾರೆ. ಈ ಸಂಬಂಧ ಮಹಿಳೆಯು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರಾಂಪುರ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಹೇಳಿಕೆಗಳನ್ನು ದಾಖಲಿಸಲು ಶಯರೂಲ್ ಕೋರ್ಟ್​ಗೆ ಬಂದ ವೇಳೆ ಅನೀಶ್ ತ್ರಿವಳಿ ತಲಾಖ್ ನೀಡಿ ಪರಾರಿಯಾಗಿದ್ದಾನೆ.

ತ್ರಿವಳಿ ತಲಾಖ್ ಅನ್ನು 2019ರ ಆಗಸ್ಟ್ 1ರಂದು ನಿಷೇಧ ಮಾಡಲಾಗಿದ್ದು, ತನ್ನ ಹೆಂಡತಿಗೆ ಮೂರು ಬಾರಿ ತಲಾಖ್ ಎಂದು ಉಚ್ಚರಿಸುವ ಯಾವುದೇ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ.

Edited By : Vijay Kumar
PublicNext

PublicNext

24/01/2021 08:06 am

Cinque Terre

64.47 K

Cinque Terre

0

ಸಂಬಂಧಿತ ಸುದ್ದಿ