ಬೆಂಗಳೂರು: ಕೊರೊನಾ ಹಾವಳಿಯ ಮಧ್ಯೆ ಹೊಸ ವರ್ಷಾಚರಣೆ ಈ ವೇಳೆ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಸುದ್ದಿಗೋಷ್ಠಿ ನಡೆಸಿ, ಹೊಸ ವರ್ಷದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದರು.
ಡಿ.31ರ ರಾತ್ರಿ ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವಂತಿಲ್ಲ.
ಯಾವುದೇ ರಸ್ತೆಗಳ ಮೇಲೆ ಸೆಲೆಬ್ರೇಷನ್ ಮಾಡಲು ಅವಕಾಶ ಇರುವುದಿಲ್ಲ.
ಖಾಸಗಿ ಕ್ಲಬ್ ಗಳು, ಅಪಾರ್ಟ್ಮೆಂಟ್ ಗಳಲ್ಲಿ ನಿವಾಸಿಗಳು ಹೊಸ ವರ್ಷ ಆಚರಣೆ ಮಾಡಬಹುದು.
ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನ ಆಯೋಜಿಸುವಂತಿಲ್ಲ.
ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಕಮಲ್ ಪಂತ್ ಹೇಳಿದರು.
ರೆಸ್ಟೋರೆಂಟ್, ಪಬ್, ಕ್ಲಬ್ ಗಳಲ್ಲಿ ಕಡ್ಡಾಯವಾಗಿ ಕೊವಿಡ್-19 ನಿಯಮಗಳನ್ನ ಪಾಲಿಸಬೇಕು.
ಗ್ರಾಹಕರಿಗೆ ಅಡ್ವಾನ್ಸ್ ಬುಕಿಂಗ್ ಮಾಡಬೇಕು. ಶೇ.50ರಷ್ಟು ಗ್ರಾಹಕರು ಬರಲು ಮಾತ್ರ ಅವಕಾಶ ನೀಡಬೇಕು.
ಕೂಪನ್ ಪಡೆದ ಗ್ರಾಹಕರು ಹೋಟೆಲ್ ಒಳಗೆ ಇರಬೇಕು. ಎಂದು ಕಮಲ್ ಪಂತ್ ಮಾಹಿತಿ ನೀಡಿದರು.
ರಾತ್ರಿ ಕಚೇರಿಯಿಂದ ಮನೆಗೆ ತೆರಳುವವರಿದ್ದರೆ, ಆಸ್ಪತ್ರೆಗೆ ಹೋಗುವವರಿದ್ದರೆ ಇಲ್ಲವೆ ಇತರೆ ಯಾವುದೇ ಅಗತ್ಯ ಸೇವೆ ಬೇಕಾದವರು ಸಂಚಾರ ನಡೆಸಬಹುದು.
ಅವರಿಗೆ ನಮ್ಮ ಕಡೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ರಾತ್ರಿ ಜಾಲಿ ರೈಡ್ ಉದ್ದೇಶ ಇಟ್ಟುಕೊಂಡು ಸಂಚಾರ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿದರು.
PublicNext
28/12/2020 07:34 pm