ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನನ-ಮರಣ ಪ್ರಮಾಣ ಪತ್ರ ಅಲೆದಾಟಕ್ಕೆ ಇನ್ನು ಮುಂದೆ ಬ್ರೇಕ್

ಇನ್ನು ಮುಂದೆ ಜನನ- ಮರಣ ಪ್ರಮಾಣ ಪತ್ರಗಳಿಗಾಗಿ ಎಲ್ಲೆಂದರಲ್ಲಿ ಅಲೆದಾಡುವ ಸಮಸ್ಯೆ ಇಲ್ಲ. ಸದ್ಯ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಆದೇಶದ ಅನ್ವಯ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜನನ-ಮರಣ ಪ್ರಮಾಣಪತ್ರಗಳನ್ನು ವಿತರಿಸಬೇಕಿದೆ.

ಅಲ್ಲದೆ, ಸರಕಾರವು ನಿಗದಿಪಡಿಸಿದ ಸೇವಾ ಶುಲ್ಕ ಪಾವತಿಸಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಸಾರ್ವಜನಿಕರು ಪ್ರಮಾಣಪತ್ರ ಪಡೆಯಬಹುದು.

ಪ್ರಮಾಣ ಪತ್ರ ಪಡೆಯಲು ನೋಂದಣಿಯಾದ ಹೆಸರು, ದಿನಾಂಕ, ತಂದೆ-ತಾಯಿಯ ಹೆಸರು ನಮೂದಿಸಿ ಪ್ರಮಾಣಪತ್ರ ಹುಡುಕಬಹುದು. ಜನನ-ಮರಣ ಪ್ರಮಾಣಪತ್ರದ ಪ್ರತೀ ಪ್ರತಿಗೆ 5 ರೂ. ಶುಲ್ಕ ಪಾವತಿಸಿ, ಪಡೆದು ಕೊಳ್ಳ ಬಹುದು ಎಂದು ದ.ಕ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಅಪರ ಜಿಲ್ಲಾ ಜನನ-ಮರಣ ರಿಜಿಸ್ಟ್ರಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By :
PublicNext

PublicNext

25/09/2020 08:55 pm

Cinque Terre

57.79 K

Cinque Terre

0

ಸಂಬಂಧಿತ ಸುದ್ದಿ