ಬೆಳಗಾವಿ: ಬೆಳಗಾವಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿರುವ ಚಿರತೆಯನ್ನು ಹಿಡಿಯಲು ಹುಕ್ಕೇರಿಯಿಂದ ಬೇಟೆ ನಾಯಿಗಳನ್ನು ತರಿಸಲಾಗಿದ್ದು ಆಪರೇಶನ್ ಚಿರತೆ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಮಧ್ಯಾಹ್ನದ ವೇಳೆ ಚಿರತೆ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಪಾರಾಗುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯಲು ಮತ್ತೆ ಕೂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಚಿರತೆ ಹಿಡಿಯಲು ನಾಯಿಗಳ ಬಳಕೆಗೆ ಮುಂದಾಗಿದ್ದಾರೆ. ಹಾಗಾಗಿ ಹುಕ್ಕೇರಿಯಿಂದ ಬೇಟೆ ನಾಯಿಗಳನ್ನು ತರಿಸಲಾಗಿದ್ದು, ಅರವಳಿಕೆ ತಜ್ಞರು ಸೇರಿ ಅನೇಕರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಹುಕ್ಕೇರಿಯಿಂದ ಬಂದಿರುವ ಶಿಕಾರಿ ನಾಯಿಗಳೊಂದಿಗೆ ಆಪರೇಷನ್ ಚಿರತೆ ಪ್ರಾರಂಭವಾಗಿದೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಕಾರ್ಯಾಚರಣೆ ಪುನರಾರಂಭವಾಗಿದ್ದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ 10ಕ್ಕೂ ಹೆಚ್ಚು ಹುಕ್ಕೇರಿ ಶಿಕಾರಿ ನಾಯಿಗಳು ಈಗ ಸಾಥ್ ನೀಡಿವೆ. ಈ ವೇಳೆ 200 ಜನ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ 20 ದಿನಗಳಿಂದ ಅರಣ್ಯ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಚಿರತೆ ಈ ಶಿಕಾರಿ ನಾಯಿಗಳಿಗೆ ಸಿಗುತ್ತಾ ಎಂಬದು ನಾಗರಿಕರ ಪ್ರಶ್ನೆಯಾಗಿದೆ.
PublicNext
23/08/2022 01:14 pm