ವಾಷಿಂಗ್ಟನ್: "ನಾನು ಮೊದಲೇ ಹೇಳಿದಂತೆ, ಗಾಂಜಾ ಬಳಸಿದ್ದಕ್ಕಾಗಿ ಅಥವಾ ಹೊಂದಿದ್ದಕ್ಕಾಗಿ ಯಾರೂ ಜೈಲಿನಲ್ಲಿರಬಾರದು. ಸೋತ ವಿಧಾನವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಾನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಅವುಗಳನ್ನು ಜಾರಿಗೊಳಿಸಲು ನನಗೆ ಅನುಮತಿ ನೀಡಿರಿ" ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಮರಿಜುವಾನ ಅಥವಾ ಗಾಂಜಾ ಹೊಂದಿದ್ದಕ್ಕಾಗಿ ರಾಷ್ಟ್ರೀಯ ಕಾನೂನಿನಡಿ ಶಿಕ್ಷೆಗೊಳಗಾಗಿದ್ದ ಸಾವಿರಾರು ಅಮೆರಿಕನ್ ನಾಗರಿಕರಿಗೆ ಕ್ಷಮಾದಾನ ಒದಗಿಸುವ ವೇಳೆ ಬೇಡನ್ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಗಾಂಜಾವನ್ನು ಸರಳವಾಗಿ ಹೊಂದಿರುವ ಎಲ್ಲಾ ಹಿಂದಿನ ಫೆಡರಲ್ ಅಪರಾಧಗಳಿಗೆ ಕ್ಷಮೆಯನ್ನು ಘೋಷಿಸುತ್ತಿದ್ದೇನೆ. ಗಾಂಜಾವನ್ನು ಸಂಪೂರ್ಣವಾಗಿ ಅಮಾನ್ಯಗೊಳಿಸುವಂತೆ ಕರೆ ನೀಡುವುದಿಲ್ಲ. ಅದರ ಬದಲಿಗೆ ಸಾಗಾಣಿಕೆ, ಮಾರ್ಕೆಟಿಂಗ್ ಮತ್ತು ಕಡಿಮೆ ವಯಸ್ಸಿನ ಮಾರಾಟದ ಮೇಲಿನ ಮಿತಿಗಳನ್ನು ಜಾರಿಗೊಳಿಸುತ್ತೇನೆ" ಎಂದು ಬೈಡೆನ್ ಹೇಳಿದ್ದಾರೆ.
ಯುಎಸ್ ನೆಲದಲ್ಲಿ ಗಾಂಜಾದ ಕುರಿತಾಗಿ ತೆಗೆದುಕೊಂಡಿರುವ ಶಿಸ್ತುಕ್ರಮಗಳ ಕುರಿತು ಸ್ವತಃ ಅಧ್ಯಕ್ಷ ಜೋ ಬೈಡೆನ್ ಸರಣಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಗಾಂಜಾದ ಕುರಿತಾಗಿ ಯಾವ ರೀತಿಯ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
PublicNext
08/10/2022 05:29 pm