ಉಕ್ರೇನ್: ರಷ್ಯಾ-ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು ಎಲ್ಲ ಮಾರ್ಗಗಳು ವಿಫಲವಾದಾಗ ರಷ್ಯಾ ಸಶಸ್ತ್ರ ದಾಳಿಯನ್ನು ಆರಂಭಿಸಿದೆ. ಪರಿಣಾಮ ಇಂದು ಗುರುವಾರ ಬೆಳಗ್ಗೆ 8:30ಕ್ಕೆ ಉಕ್ರೇನ್ ಮೇಲೆ ದಾಳಿ ಮಾಡಿದೆ. ಉಕ್ರೇನ್ ಗಡಿ ಪ್ರವೇಶಿಸಿದ ರಷ್ಯನ್ ಮಿಲಿಟರಿ ಪಡೆಗಳು ಹಲವೆಡೆ ದಾಳಿ ನಡೆಸಿ ಅಲ್ಲಿನ ರಾಜಧಾನಿ ಕೀವ್ ನಗರವನ್ನು ಪ್ರವೇಶಿಸಿವೆ. ವರದಿಗಳ ಪ್ರಕಾರ, ಇದುವರೆಗೆ 40 ಉಕ್ರೇನ್ ಸೈನಿಕರು ಮತ್ತು 10 ನಾಗರಿಕರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ರಷ್ಯಾದ 50 ಯೋಧರನ್ನು ಹಾಗೂ 6 ಫೈಟರ್ ಜೆಟ್ ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ರಷ್ಯಾ ಮೂರು ಕಡೆಯಿಂದ ಅಂದರೆ ಬೆಲಾರಸ್, ಕ್ರಿಮಿಯಾ ಹಾಗೂ ಪೂರ್ವ ಭಾಗದ ಮೂಲಕ ಉಕ್ರೇನ್ ಮೇಲೆ ದಾಳಿ ಮಾಡುತ್ತಿದ್ದು, ಸಾಕಷ್ಟು ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗುತ್ತಿದೆ. ಮತ್ತೊಂದೆಡೆ ಕೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚುವುದಿಲ್ಲ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಹೇಳಿದ್ದಾರೆ. ಇದು ಮೊದಲಿನಂತೆಯೇ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
PublicNext
24/02/2022 11:12 pm