ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಘಾನಿಸ್ತಾನದಿಂದ 300 ಭಾರತೀಯರ ರಕ್ಷಣೆ: ಇಂದು ದೇಶಕ್ಕೆ ವಾಪಸ್ ಸಾಧ್ಯತೆ

ನವದೆಹಲಿ: ತಾಲಿಬಾನ್ ಬಿಗಿಹಿಡಿತದಲ್ಲಿರುವ ಅಪ್ಘಾನಿಸ್ತಾನದಲ್ಲಿ ಪ್ರಾಣ ಭೀತಿಯಲ್ಲಿದ್ದ 300 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. ಈ ಎಲ್ಲರೂ ಇಂದು ಭಾನುವಾರ ವಾಪಸ್ ಭಾರತಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೂ ಮುನ್ನ ತಜಕಿಸ್ತಾನದ ರಾಜಧಾನಿ ದುಶಾಂಬೆಗೆ ಶನಿವಾರ (ಆ.21)ರಂದು 80 ಮಂದಿ ಭಾರತೀಯರನ್ನು ಐಎಎಫ್ ನ ಮಿಲಿಟರಿ ಸಾರಿಗೆ ವಿಮಾನದ ಮೂಲಕ ಕರೆತರಲಾಗಿದ್ದು ಭಾನುವಾರದಂದು ಅವರು ಏರ್ ಇಂಡಿಯಾ ವಿಮಾನದ ಮೂಲಕ ಭಾರತ ತಲುಪಲಿದ್ದಾರೆ.

ಇನ್ನು ಐಎಎಫ್ ನ ಹೆವಿ ಲಿಫ್ಟ್ ವಿಮಾನದ ಮೂಲಕ 100 ಮಂದಿ ಭಾರತೀಯರನ್ನು ವಾಪಸ್ ಕರೆತರಲಾಗುತ್ತದೆ. ಇನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 90 ಕ್ಕೂ ಹೆಚ್ಚು ಮಂದಿ ಯುಎಸ್ ಹಾಗೂ ನ್ಯಾಟೋ ವಿಮಾನಗಳ ಮೂಲಕ ದೋಹಾ ತಲುಪಿದ್ದೂ ಅವರನ್ನೂ ಭಾನುವಾರ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.

Edited By : Nagaraj Tulugeri
PublicNext

PublicNext

22/08/2021 07:42 am

Cinque Terre

59.17 K

Cinque Terre

2

ಸಂಬಂಧಿತ ಸುದ್ದಿ