ವಾಷಿಂಗ್ಟನ್ : ಅಮೆರಿಕ ಕೋರ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಕೋರ್ಟ್ ವಜಾಗೊಳಿಸಿದೆ.
ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಹಾಗೂ ₹ 735 ಕೋಟಿ (100 ದಶಲಕ್ಷ ಡಾಲರ್) ಪರಿಹಾರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಕಾಶ್ಮೀರ್ ಖಲಿಸ್ತಾನ ರೆಫರಂಡಮ್ ಫ್ರಂಟ್ ಹಾಗೂ ಇತರ ಎರಡು ಸಂಘಟನೆಗಳು ಈ ಅರ್ಜಿಯನ್ನು ಸಲ್ಲಿಸಿದ್ದವು.
ಪ್ರತ್ಯೇಕತಾವಾದಿ ವಕೀಲ ಗುರುಪತ್ವಂತ್ ಸಿಂಗ್ ಪನ್ನೂನ್ ಈ ಸಂಘಟನೆಗಳ ಪರ ವಾದ ಮಂಡಿಸಿದ್ದರು.
'ಈ ಸಂಘಟನೆಗಳ ಪ್ರತಿನಿಧಿಗಳು ಎರಡು ಬಾರಿ ವಿಚಾರಣೆಗೆ ಗೈರು ಹಾಜರಾದ ಕಾರಣ ಅವುಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ' ಎಂದು ಟೆಕ್ಸಾಸ್ ನ ಸದರ್ನ್ ಡಿಸ್ಟ್ರಿಕ್ಟ್ ಕೋರ್ಟ್ನ ನ್ಯಾಯಾಧೀಶ ಫ್ರಾನ್ಸಿಸ್ ಎಚ್.ಸ್ಟ್ಯಾಸಿ ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
2019ರ ಸೆ. 19ರಂದು ಕೋರ್ಟ್ ಮೆಟ್ಟಿಲೇರಿದ್ದವು. ಮೋದಿ ಹಾಗೂ ಶಾ ಅವರಲ್ಲದೇ ಲೆ.ಜ.ಕನ್ವಲ್ ಜಿತ್ ಸಿಂಗ್ ಧಿಲ್ಲೋನ್ ವಿರುದ್ಧವೂ ಅರ್ಜಿ ಸಲ್ಲಿಸಲಾಗಿತ್ತು.
PublicNext
15/12/2020 06:02 pm