ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಜಾತ ಶಿಶು ಪೋಷಕರ ಮಡಿಲಿಗೆ ಸೇರಿಸಿದ ಪೊಲೀಸ್ ಸಿಬ್ಬಂದಿಗೆ ಸನ್ಮಾನ: ಚಂದ್ರಮ್ಮರಿಗೆ 25 ಸಾವಿರ ಬಹುಮಾನ

ದಾವಣಗೆರೆ: ಇತ್ತೀಚೆಗೆ ದಾವಣಗೆರೆ ನಗರದ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಅಪರಹಣಕ್ಕೊಳಗಾಗಿದ್ದ ಮಗು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ನಗರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದ ಪೊಲೀಸ್ ಸಿಬ್ಬಂದಿಯ ತಂಡವನ್ನ ಸನ್ಮಾನಿಸಲಾಯಿತು. ಮಗು ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂದ್ರಮ್ಮರಿಗೆ 25 ಸಾವಿರ ರೂಪಾಯಿ ನೀಡಲಾಯಿತು‌.

ಶಿಲ್ಪಾ ವೈ.ಎಸ್. ಪಿಐ, ಮಹಿಳಾ ಪೊಲೀಸ್ ಠಾಣೆಯ ಪಿಐ ವೈ. ಎಸ್. ಶಿಲ್ಪಾ, ಪಿಎಸ್ಐ ಗಳಾದ ಪ್ರಭು ಡಿ. ಕೆಳಗಿನಮನೆ, ಅರವಿಂದ ಬಿ.ಎಸ್., ಶಮಿಮ್ ಉನ್ನಿಸಾ, ಮಾಳವ್ವ ಹೆಚ್., ಮಹಿಳಾ ಠಾಣೆ ಮತ್ತು ಸಿಬ್ಬಂದಿಯಾದ ರಸೂಲ್ ಸಾಬ್, ರಾಘವೇಂದ್ರ ಕೆ.ಕೆ., ಗಿರೀಶ್, ಗೋವಿಂದಪ್ಪ ಮುನೇಗೌಡ ಅವರನ್ನು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಎಸ್ಪಿ ಸಿ.ಬಿ ರಿಷ್ಯಂತ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದ ಮಗು ತಮಗೆ ಸಿಕ್ಕ ಕೂಡಲೇ ಪೊಲೀಸರ ವಶಕ್ಕೆ ನೀಡಿ ಮಗು ಪತ್ತೆಗೆ ಸಹಕರಿಸಿದ ಎಸ್. ಪಿ.‌ನಗರದ ಚಂದ್ರಮ್ಮ ಅವರನ್ನು ಸನ್ಮಾನಿಸಲಾಯಿತು‌. 25 ಸಾವಿರ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

Edited By : Nagaraj Tulugeri
PublicNext

PublicNext

13/04/2022 06:44 pm

Cinque Terre

37.46 K

Cinque Terre

0