ಅಥಣಿ : ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಶರಣರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಥಣಿಯಲ್ಲಿ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಅವರ ನೇತೃತ್ವದಲ್ಲಿ ಅಥಣಿಯ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಅಥಣಿ ತಹಸಿಲ್ದಾರ್ ಸುರೇಶ ಮುಂಜೆ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು
ಇದೆ ಸಂದರ್ಭದಲ್ಲಿ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಮಾತನಾಡಿ ಮುರುಘಾ ಶರಣರ ಮೇಲೆ ದಾಖಲಾಗಿರುವ ಫೋಸ್ಕೊ ಪ್ರಕರಣದ ತನಿಖೆಯನ್ನ ರಾಜ್ಯ ಮತ್ತು ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಉನ್ನತ ಮಟ್ಟದ ಅಧಿಕಾರಿಗಳಿಂದ ಪಕ್ಷಾತಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿವಂತೆ ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.
ಈ ವೇಳೆ ಪ್ರದೇಶ ಮಾದಿಗರ ಸಂಘದ ಪದಾಧಿಕಾರಿಗಳಾದ ಕುಮಾರ್ ಗಸ್ತಿ, ನ್ಯಾಯವಾದಿಗಳಾದ ಪ್ರಮೋದ ಹಿರೇಮನಿ, ಜಿಲ್ಲಾಧ್ಯಕ್ಷ ರಾಜು ರಾಜಂಗಳೆ, ಪರಶುರಾಮ ಅವಳೆ, ಹಣಮಂತ ಮಾದರ, ವಿದ್ಯಾ ಮರಡಿ, ನಿರ್ಮಲಾ ರೊಖಡಿ, ಜಾನಕಿ ದೇವರಮನಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
08/09/2022 01:42 pm