ಜೈಪುರ: ರಾಜಸ್ಥಾನದ ಕರೌಲಿಯಲ್ಲಿ ನಡೆದ ಕೋಮು ಗಲಭೆಯಲ್ಲಿ ಹಿಂಸಾಚಾರ ತೀವ್ರ ಸ್ವರೂಪದಲ್ಲಿ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ಹಚ್ಚಿದ ಬೆಂಕಿಯ ಜ್ವಾಲೆ ನಡುವೆ ಸಿಲುಕಿದ್ದ ಬಾಲಕಿಯನ್ನು ಕಾನ್ಸ್‌ಟೇಬಲ್ ಒಬ್ಬರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದರು.
ಇವರ ಶೌರ್ಯ ಮೆಚ್ಚಿದ ರಾಜಸ್ಥಾನ ಪೊಲೀಸ್ ಇಲಾಖೆ ಈ ಕಾನ್ಸ್‌ಟೇಬಲ್‌ಗೆ ಔಟ್ ಆಫ್ ಟರ್ನ್ ಮೂಲಕ 'ಹೆಡ್ ಪೊಲೀಸ್ ಕಾನ್ಸ್‌ಟೇಬಲ್' ಹುದ್ದೆಗೆ ಪದೋನ್ನತಿ ನೀಡಿದೆ.
31 ವರ್ಷದ ಕಾನ್ಸ್‌ಟೇಬಲ್ ನೇತ್ರೇಶ್ ಶರ್ಮಾ ಅವರೇ ಬಾಲೆಯನ್ನು ರಕ್ಷಿಸಿದ ಶೌರ್ಯವಂತ. ಅವರ ಸಾಹಸವನ್ನು ಮೆಚ್ಚಿದ ರಾಜಸ್ಥಾನ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ನೇತ್ರೇಶ್ ಅವರಿಗೆ ಹೆಡ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ನೀಡಿ ಪ್ರಮೋಷನ್ ಕೊಟ್ಟಿದೆ. ಬೆಂಕಿ ಜ್ವಾಲೆಯ ನಡುವೆ ನುಗ್ಗಿ ಬಾಲಕಿಯನ್ನು ರಕ್ಷಿಸಿದ ನೇತ್ರೇಶ್ ಅವರ ಕಾರ್ಯಕ್ಕೆ ಸಹೋದ್ಯೋಗಿಗಳು ಹಾಗೂ ಇತರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
05/04/2022 11:06 am