ಬೆಂಗಳೂರು: ರಾಜ್ಯದಲ್ಲಿ ಎಷ್ಟು ಗೋಶಾಲೆಗಳು ನಿರ್ಮಾಣವಾಗಿವೆ? ಅವುಗಳೆಲ್ಲ ಎಷ್ಟು ಸುಸೂತ್ರವಾಗಿ ನಡೆಯುತ್ತಿವೆ? ಈ ಎಲ್ಲ ಮಾಹಿತಿ ಕೇಳಿದರೆ ಕೇವಲ ಕಾಗದ ತೋರೀಸುತ್ತೀರಲ್ಲ ಎಂದು ಸರ್ಕಾರದ ಮೇಲೆ ಹೈಕೋರ್ಟ್ ಗರಂ ಆಗಿದೆ.
'ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ಗೋ ಶಾಲೆ ಆರಂಬಿಸಬೇಕು. ಮತ್ತು ಈಗಿರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ನೀರು, ಮೇವು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಹಾಗೂ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ಎಲ್ಲೆಲ್ಲಿ ಎಷ್ಟೆಷ್ಟು ಗೋಶಾಲೆಗಳು ನಿರ್ಮಾಣವಾಗಿವೆ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಲ್ಲಿ ಸರ್ಕಾರಿ ವಕೀಲ ಎಚ್.ಆರ್ ಶೌರಿ ವಿಫಲರಾದರು.
ಗೋಶಾಲೆ ಎಲ್ಲಿದೆ ಎಂದರೆ ಜಾಗ ಮಂಜೂರಾತಿ, ಅನುದಾನ ಬಿಡುಗಡೆ ಬಗ್ಗೆ ಅಷ್ಟೇ ಹೇಳುತ್ತಿದ್ದೀರಿ. ಎಲ್ಲೆಲ್ಲಿ ಎಷ್ಟು ಗೋಶಾಲೆಗಳ ನಿರ್ಮಾಣ ಆಗಿದೆ? ಏನು ಅಭಿವೃದ್ಧಿಪಡಿಸಿದ್ದೀರಿ? ಇದೆಲ್ಲದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ಅಂದ ಮೇಲೆ ಗೋಶಾಲೆ ಕೇವಲ ಕಾಗದದ ಮೇಲೆ ಇದೆ ಎಂದು ಅಸಮಾಧಾನಿತರಾದರು.
ಸರ್ಕಾರಿ ವಕೀಲರ ಉತ್ತರ ಸಮರ್ಪಕವಾಗಿಲ್ಲ ಎಂದ ಹೈಕೋರ್ಟ್ ನಿಮ್ಮ ಉತ್ತರ ನಮಗೆ ತೃಪ್ತಿ ನೀಡಿಲ್ಲ ಮುಂದಿನ ವಿಚಾರಣೆ ವೇಳೆ ವಸ್ತುಸ್ಥಿತಿಯನ್ನು ಕೋರ್ಟ್‌ಗೆ ಮಂಡಿಸಿ ಎಂದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
PublicNext
29/03/2022 06:08 pm