ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ವಿರೋಧಿ SBI ನಿರ್ಧಾರ : ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ನವದೆಹಲಿ: 3 ತಿಂಗಳ ಮೇಲ್ಪಟ್ಟ ಗರ್ಭಿಣಿಯರು 'ಕೆಲಸಕ್ಕೆ ಅನರ್ಹ' ಎಂದು ಎಸ್ ಬಿಐ ಹೊರಡಿಸಿದ ನಿಯಮಕ್ಕೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ‘ತಾತ್ಕಾಲಿಕ ಅನರ್ಹ’ ಎಂದು ಹೇಳಿರುವ ಎಸ್ ಬಿಐ ಹೆರಿಗೆಯ ನಂತರದ ನಾಲ್ಕು ತಿಂಗಳೊಳಗೆ ಪುನಃ ಕೆಲಸಕ್ಕೆ ಹಾಜರಾಗಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ.

ಈ ನಿಯಮ ಮಹಿಳಾ ವಿರೋಧಿಯಾಗಿದೆ. ಹೊಸ ನಿಯಮವನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ, ಎಸ್ ಬಿಐ ಬ್ಯಾಂಕಿನ ಈ ನಿಯಮ ತಾರತಮ್ಯ ಮತ್ತು ಕಾನೂನು ಬಾಹಿರ ನಿಲುವಾಗಿದೆ. ಈ ನಿಯಮವನ್ನು ತಕ್ಷಣವೇ ಹಿಂಪಡೆಯಬೇಕೆಂದು ನೋಟಿಸ್ ನೀಡಿದ್ದೇವೆ. ಜೊತೆಗೆ ಹಿಂದಿನ ನಿಯಮದ ಮತ್ತು ಬದಲಾವಣೆಯಾದ ನಿಯಮಗಳ ಒಂದು ಪ್ರತಿಯನ್ನು ಸಹ ಕೇಳಿದ್ದೇವೆ ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

29/01/2022 05:14 pm

Cinque Terre

63.19 K

Cinque Terre

0

ಸಂಬಂಧಿತ ಸುದ್ದಿ