ನವದೆಹಲಿ: ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ಆರ್. ಹರಿಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.30 ರಂದು ನಿವೃತ್ತರಾಗಲಿದ್ದಾರೆ.
ಉಪ ಅಡ್ಮಿರಲ್ ಹರಿಕುಮಾರ್ ಅವರು ಈಗ ವೆಸ್ಟ್ರನ್ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅಡ್ಮಿರಲ್ ಆರ್ ಹರಿಕುಮಾರ್ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದು, ನ.30 ರ ಮಧ್ಯಾಹ್ನದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
1962 ರ ಏಪ್ರಿಲ್ 12 ರಂದು ಜನಿಸಿದ ಉಪ ಅಡ್ಮಿರಲ್ ಕುಮಾರ್ ಅವರು 1983 ರ ಜ.1 ರಂದು ಸೇವೆಗೆ ಸೇರ್ಪಡೆಯಾಗಿದ್ದರು. ಐಎನ್ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್ಎಸ್ ಕೋರಾ, ಗುರಿ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ರಣವೀರ್ಗಳಲ್ಲಿ ಕಾರ್ಯನಿರ್ವಹಿಸಿರುವ ಹರಿಕುಮಾರ್ ಅವರು ನಾಯಕತ್ವದ ಅನುಭವ ಹೊಂದಿದ್ದಾರೆ.
PublicNext
10/11/2021 07:31 am