ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನೊಬ್ಬರ ಭಾವನೆ ಮೇಲೆ ಹೊಡೆಯುವ ಕೆಲಸ ಯಾರೂ ಮಾಡಬಾರದು: ಸಂತೋಷ್ ಹೆಗ್ಡೆ

ನೆಲಮಂಗಲ: ಎಲ್ಲರೂ ಅವರವರ ಧರ್ಮವನ್ನು ನಂಬಿದ್ದಾರೆ. ಇಲ್ಲಿ ಎಲ್ಲರ ನಂಬಿಕೆ ಆಚರಣೆಗಳು ಅವರವರಿಗೆ ಮುಖ್ಯ. ಇನ್ನೊಬ್ಬರ ಭಾವನೆಯನ್ನು ಹೊಡೆಯುವ ಕೆಲಸ ಮಾಡಬಾರದು. ಧರ್ಮ ಮತ್ತು ಭಾಷೆಯನ್ನು ಎಲ್ಲಿ ಬಳಕೆ ಮಾಡಬೇಕೋ ಅಲ್ಲಿ ಬಳಸಬೇಕು ಎಂದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ನೆಲಮಂಗಲದ ಹೊಯ್ಸಳ ಪದವಿ ಪೂರ್ವ ಕಾಲೇಜು ನೇತೃತ್ವದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಮಾರಂಭ ಹಾಗೂ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಿಜಾಬ್ ವಿವಾರವಾಗಿ ಹೈಕೋರ್ಟ್ ತೀರ್ಪು ನೀಡಿದೆ. ಆ ತೀರ್ಪು ಒಪ್ಪಿಗೆ ಆಗದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗಬಹುದು. ಅದು ಬಿಟ್ಟು ಕೋರ್ಟ್ ವಿರುದ್ಧ ಬಂದ್ ಮಾಡುವುದು ಸರಿಯಲ್ಲ. ನ್ಯಾಯಾಲಯದ ಮಾತಿಗೆ ಎಲ್ಲದರು ಬೆಲೆ ಕೊಡಬೇಕು ಎಂದು ಸಂತೋಷ್ ಹೆಗ್ಡೆ ಇದೇ ವೇಳೆ ಹೇಳಿದರು.

Edited By : Nagaraj Tulugeri
PublicNext

PublicNext

25/03/2022 10:44 pm

Cinque Terre

60.98 K

Cinque Terre

4