ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಫ್‌ಲೈನ್ ಪರೀಕ್ಷೆ ರದ್ದುಗೊಳಿಸಲು ಕೋರಿದ್ದ ಅರ್ಜಿ 'ಸುಪ್ರೀಂ'ನಿಂದ ವಜಾ

ನವದೆಹಲಿ: ಸಿಬಿಎಸ್‌ಇ ವತಿಯಿಂದ ನಡೆಸಲಾಗುವ 10 ಮತ್ತು 12ನೇ ತರಗತಿ ಹಾಗೂ ಇನ್ನಿತರ ಶಿಕ್ಷಣ ಮಂಡಳಿಗಳ ಆಫ್‌ಲೈನ್‌ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಇಂತಹ ಅರ್ಜಿಗಳನ್ನು ಪುರಸ್ಕರಿಸುವುದರಿಂದ ವ್ಯವಸ್ಥೆಯಲ್ಲಿ ಇನ್ನಷ್ಟು ಗೊಂದಲ ಉಂಟಾಗುತ್ತದೆ ಎಂದಿರುವ ನ್ಯಾಯಾಲಯ, ‘ಇಂತಹ ಅರ್ಜಿಗಳು ವಿದ್ಯಾರ್ಥಿಗಳಿಗೆ ಹುಸಿ ಭರವಸೆ ಮೂಡಿಸುತ್ತವೆ’ ಎಂದು ಹೇಳಿದೆ.

ಅರ್ಜಿಯಲ್ಲಿ ಏನಿತ್ತು?:

ದೇಶದಲ್ಲಿ ಕೊರೊನಾ ಭೀತಿಯಿಂದಾಗಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಇತ್ತೀಚೆಗೆ ಕೋವಿಡ್ ಭೀತಿ ನಿವಾರಣೆಯಾಗಿ, ತರಗತಿಗಳು ಪುನರಾರಂಭವಾಗಿದ್ದರೂ ಪಠ್ಯಕ್ರಮ ಪೂರ್ಣಗೊಳಿಸಲಾಗಿಲ್ಲ. ಹಾಗಾಗಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಅನುಭಾ ಶ್ರೀವಾಸ್ತವ ಸಹಾಯ್ ಮನವಿ ಸಲ್ಲಿಸಿದ್ದರು.

Edited By : Vijay Kumar
PublicNext

PublicNext

23/02/2022 04:40 pm

Cinque Terre

52.84 K

Cinque Terre

0