ಬೆಳಗಾವಿ : ರಾಜ್ಯದಲ್ಲಿ ಹಿಜಾಬ್ ಬೆಂಕಿ ಎಲ್ಲೇಡೆ ಪಸರಿಸುತ್ತಿದ್ದು ಸದ್ಯ ಕುಂದಾನಗರೀಯಲ್ಲಿ ಉಗ್ರ ಸ್ವರೂಪ ಪಡೆದುಕೊಂಡಿದೆ. ಹಿಜಾಬ್ ಇಲ್ಲದೆ ತರಗತಿಗೆ ಹಾಜರಾಗುವಂತೆ ಪ್ಯಾರಾ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದೆ.
ಆದರೆ ವಿದ್ಯಾರ್ಥಿಗಳು ನಾವು ಹಿಜಾಬ್ ಹಾಕಿಕೊಂಡೆ ಬರುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದ ಘಟನೆ ಬೆಳಗಾವಿಯ ವಿಜಯಾ ಇನ್ಸ್ಟಿಟ್ಯೂಟ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಈ ವೇಳೆ ಕಾಲೇಜಿನ ಆವರಣದಲ್ಲಿ ಯುವಕರ ಗುಂಪೊಂದು ಏಕಾಏಕಿ ಗಲಾಟೆ ಆರಂಭಿಸಿದೆ ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಬಂದ ಪೊಲೀಸರ ಮತ್ತು ಪ್ರಾಂಶುಪಾಲರ ಜತೆ ಯುವಕರು ವಾಗ್ವಾವನ್ನು ನಡೆಸಿದ್ದಾರೆ.
ಸಾಲದಕ್ಕೆ ಅಲ್ಲಾಹೂ ಅಕ್ಬರ್ ಎಂದು ಘೋಷಣೆ ಕೂಗಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರು ಕಿರಿಕ್ ಮಾಡಿದ 6 ಜನ ಯುವಕರನ್ನು ವಶಕ್ಕೆ ಪಡೆದಿದ್ದಾರೆ.
PublicNext
17/02/2022 02:51 pm