ಚಿಕ್ಕಮಗಳೂರು: ಹಿಜಾಬ್ ನಿಷೇಧ ಮಾಡಿದವರ ಮನೆ ಹಾಳಾಗಿ ಹೋಗಲಿ. ಆ ಸೂ....ಮಕ್ಕಳ ಮನೆತನ ಹಾಳಾಗಿ ಹೋಗಲಿ. ನಾವು ಸತ್ತರೂ ಮಣ್ಣಲ್ಲಿ ಹಿಜಾಬ್ ಹಾಕುತ್ತೇವೆ. ಈ ಸರ್ಕಾರಕ್ಕೆ ಚಪ್ಪಲಿ ತಗೋಬೇಕು ಎಂದು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯೊಬ್ಬರು ಸರ್ಕಾರದ ವಿರುದ್ಧ ತಮ್ಮ ರೆಬೆಲ್ ಅವತಾರ ತೋರಿಸಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢ ಶಾಲೆಯಲ್ಲಿ ಹಿಜಬ್ ಸಂಘರ್ಷ ಭುಗಿಲೆದ್ದಿದೆ. ಇಂದು ಶಾಲೆಗೆ ಬಂದ ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯಲ್ಲ ಎಂದು ಮತ್ತೆ ಹಟ ಹಿಡಿದಿದ್ದಾರೆ. ಇನ್ನು ಇದೇ ವೇಳೆ ಅಲ್ಲಿದ್ದ ಮಹಿಳೆಯೊಬ್ಬರು ಅವಾಚ್ಯ ಶಬ್ದಗಳಿಂದ ಸರ್ಕಾರವನ್ನು ನಿಂದಿಸಿದ್ದಾಳೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ಫೋಷಕರ ಜೊತೆ ಮಕ್ಕಳು ಸೇರಿ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ್ದಾರೆ.
PublicNext
17/02/2022 02:16 pm