ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

75ನೇ ಸ್ವಾತಂತ್ರ್ಯೋತ್ಸವ : ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪ್ರಶಸ್ತಿ ಗೌರವ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯದ ಇಬ್ಬರು ಎಡಿಜಿಪಿಗಳು ಸೇರಿದಂತೆ ಒಟ್ಟು 21 ಮಂದಿ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಸಿಐಎಸ್ ಎಫ್ ನ ಹಿರಿಯ ಅಧಿಕಾರಿಗೆ ಹಾಗೂ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೂ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ ಆರ್ಥಿಕ ಅಪರಾಧಗಳ ಎಡಿಜಿಪಿ ಉಮೇಶ್ ಕುಮಾರ್, ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅರುಣ್ ಚಕ್ರವರ್ತಿ ಅವರು ಭಾಜರಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕಕ್ಕೆ ಬೆಂಗಳೂರಿನ ಕೆಎಸ್ ಆರ್ ಪಿಯ 3ನೇ ಬೆಟಾಲಿಯನ್ನ ಕಮಾಂಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರ ಉಪವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ರವಿ.ಪಿ, ರಾಜ್ಯ ಗುಪ್ತವಾರ್ತೆ ವಿಭಾಗದ ಡಿವೈಎಸ್ಪಿ ನವೀನ್ ಕುಲಕರ್ಣಿ, ದಕ್ಷಿಣ ವಿಭಾಗದ ತಲ್ಲಘಟ್ಟಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಸಿದ್ದರಾಜು,

ಎಸಿಬಿ ಇನ್ ಸ್ಪೆಕ್ಟರ್ ಎನ್.ಜೆ.ದಯಾನಂದ್, ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿಯ ಕೆಎಸ್ಆರ್ಪಿ ತರಬೇತಿ ಶಾಲೆಯ ವಿಶೇಷ ಆರ್ ಎಸ್ಐ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಮಹಿಳಾ ಪಿಎಸ್ಐ ಎಸ್.ಇ.ಗೀತಾ, ಕೆಎಸ್ ಆರ್ ಪಿ 3ನೇ ಬೆಟಾಲಿಯನ್ನ ವಿಶೇಷ ಎಆರ್ ಎಸ್ ಐ ಬಿ.ಎಸ್.ಗೋವರ್ಧನರಾವ್, ಮಂಗಳೂರು ನಗರದ ಸೈಬರ್ ಅಪರಾಧಗಳ ಠಾಣೆಯ ಎಎಸ್ ಐ ಮೋಹನ್, ಬೆಂಗಳೂರಿನ ವೈರ್ ಲೆಸ್ ವಿಭಾಗದ ಎಎಸ್ ಐ ರಾಮನಾಯಕ್,

ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆ ಬಲ್ ಮೊಹಮ್ಮ್ ಮುನಾವರ್ ಪಾಷಾ, ಬೆಂಗಳೂರಿನ ಕೆಎಸ್ ಆರ್ ಪಿ 4ನೇ ಬೆಟಾಲಿಯನ್ ನ ವಿಶೇಷ ಆರ್ ಎಚ್ ಸಿ ಎಸ್.ಪಿ.ಕೆರುಟಗಿ, ಬಳ್ಳಾರಿ ಡಿಎಆರ್ ನ ಎಎಚ್ ಸಿ ಬಿ.ಎಸ್.ದಾದಾ ಅಮೀರ್, ಯಲಹಂಕ ಎಪಿಟಿಎಸ್ ನ ಎಎಚ್ ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್ ಸಿ ಆರ್.ಕುಮಾರ್, ಬೆಂಗಳೂರು ಕೆಎಸ್ಆರ್ಪಿ 3ನೇ ಬೆಟಾಲಿಯನ್ ವಿಶೇಷ ಆರ್ಎಚ್ ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ ಧಾರವಾಡದ ಸಿಸಿಆರ್ ಬಿಯ ಸಿಎಚ್ ಸಿ ಗೋಪಾಲ ದೇವೇಂದ್ರಪ್ಪ ಕೊಟಬಾಗಿ ಅವರಿಗೆ ಪ್ರಶಸ್ತಿ ಸಂದಿವೆ.

ಮಂಗಳೂರಿನ ಸಿಐಎಸ್ ಎಫ್ ನ ಸಹಾಯಕ ಕಮಾಂಡೆಂಟ್ ಸಂತೋಷ್ಕುಮಾರ್.ಪಿ ಅವರಿಗೂ ಶ್ಲಾಘನೀಯ ಸೇವಾ ಪದಕ ದೊರೆತಿದೆ.

ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪಡೆಯ ವಿಶೇಷ ಪದಕಕ್ಕೆ ಕರ್ನಾಟಕದ ಗೃಹ ರಕ್ಷಕ ದಳದ ಕಮಾಂಡೆಂಟ್ ಅಜ್ಮಲ್ ಸಾಕೀಬ್ ಮೊಹಮ್ಮದ್, ಫ್ಲಟೂನ್ ಕಮಾಂಡರ್ ಗಳಾದ ಸುಜೇಂದ್ರ ಕುಮಾರ್ ನಾರೇಪ್ಪ .ಸಿ, ಜಗನ್ನಾಥ್ ಕರಿಯಪ್ಪ, ವಿಶೇಷ ಫ್ಲಟೂನ್ ಕಮಾಂಡರ್ ನಿಂಬಣ್ಣಗೌಡ, ನಾಗರಿಕ ರಕ್ಷಣಾ ಪಡೆಯ ವಿಭಾಗೀಯ ವಾರ್ಡನ್ ಗಳಾದ ರಾಜೇಶ್ ಶಂಕರನಾರಾಯಣ ಮಾಕಂ, ಮೋಹನ್ ಕೃಷ್ಣಪ್ಪ ಅವರು ಭಾಜನರಾಗಿದ್ದಾರೆ.

ಅಗ್ನಿಶಾಮಕ ದಳದ ಫೈರ್ ಸ್ಟೇಷನ್ ಆಫೀಸರ್ ಬಿ.ಪಿ.ಕೃಷ್ಣಪ್ಪ, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಿದಾನಂದ ದುಂಡಪ್ಪ ಮಾನೆ, ಮುಂಚೂಣಿ ಅಗ್ನಿಶಾಮಕ ಸಿಬ್ಬಂದಿ ಮೀರ್ ಮೊಹಮ್ಮದ್ ಗೌಸ್, ಚಾಲಕರುಗಳಾದ ಕೆ.ಆರ್.ಮಂಜುನಾಥ್, ಪ್ರಶಾಂತ್ಕುಮಾರ್ ಅವರುಗಳು ರಾಷ್ಟ್ರಪತಿ ಅವರ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ.

Edited By : Nirmala Aralikatti
PublicNext

PublicNext

14/08/2021 06:23 pm

Cinque Terre

48.9 K

Cinque Terre

0

ಸಂಬಂಧಿತ ಸುದ್ದಿ