ಬೆಂಗಳೂರು: ಯುವರಾಜ್ ಸ್ವಾಮಿ ಜೊತೆಗೆ ಹಣಕಾಸು ವ್ಯವಹಾರ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ಈ ಮೂಲಕ ಶುಕ್ರವಾರ (ನಾಳೆ) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ರಾಧಿಕಾ ಕುಮಾರಸ್ವಾಮಿ ಅಕೌಂಟ್ಗೆ 75 ಲಕ್ಷ ರೂ. ವರ್ಗಾವಣೆ ಆಗಿರುವ ಬಗ್ಗೆ ಸಿಸಿಬಿ ಬಳಿ ಮಾಹಿತಿ ಇದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರವಿರಾಜ್ರನ್ನು ಸಿಸಿಬಿ ಅಧಿಕಾರಿಗಳು ಒಮ್ಮೆ ವಿಚಾರಣೆ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ರಾಧಿಕಾ ಕುಮಾರಸ್ವಾಮಿ ಅಕೌಂಟ್ಗೆ ವರ್ಗಾವಣೆಯಾದ ಬಗ್ಗೆ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ನಾಳೆ ರಾಧಿಕಾ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
PublicNext
07/01/2021 05:45 pm