ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಸ್ಕ್ ಧರಿಸದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು..!

ದಾವಣಗೆರೆ: ಮಾಸ್ಕ್ ಹಾಕದೇ ಬಂದು ಪೊಲೀಸರ ಕೈಗೆ ಸಿಕ್ಕು ಬಿದ್ದು ಬೈಕ್ ಸವಾರರು ಸಂಕಷ್ಟ ಅನುಭವಿಸಿದ ಘಟನೆ ದಾವಣಗೆರೆ ನಗರದ ಎವಿಕೆ ರಸ್ತೆಯಲ್ಲಿ ನಡೆದಿದೆ.

ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ, ಈ ಬಗ್ಗೆ ಎಚ್ಚೆತ್ತುಕೊಳ್ಳದ ಜನರುಮಾಸ್ಕ್ ಹಾಕದೇ ಓಡಾಡುತ್ತಿದ್ದಾರೆ.

ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಕೂಡ ತಪಾಸಣೆ ನಡೆಸುತ್ತಿದ್ದಾರೆ.

ಎವಿಕೆ ರಸ್ತೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಬಂದ್ ಬೈಕ್ ಸವಾರರಿಬ್ಬರಿಗೆ ಪೊಲೀಸರು ದಂಡವನ್ನ ವಿಧಿಸಿ ಬಿಸಿ ಮುಟ್ಟಿಸಿದರು. ಬಳಿಕ ದಂಡ ಕಟ್ಟಲು ಹಣವಿಲ್ಲದೇ ಬಿಟ್ಟು ಬಿಡುವಂತೆಪೊಲೀಸರನ್ನ ಕಾಡಿ ಬೇಡಿದ ದೃಶ್ಯವೂ ಕಂಡು ಬಂತು. ಬಳಿಕ, ಪೊಲೀಸರು ಬೈಕ್ ಅನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ ಬಳಿಕ ಸವಾರರು ಡಂದ ಕಟ್ಟಲು ಮುಂದಾಗಿದ್ದರು.

Edited By : Shivu K
PublicNext

PublicNext

16/01/2022 12:20 pm

Cinque Terre

83.98 K

Cinque Terre

0