ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರಿಗೆ ನೌಕರರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಏನದು?

ಬೆಂಗಳೂರು- ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಇಂದು ಸರ್ಕಾರ ಮತ್ತೊಮ್ಮೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಮಸ್ಯೆ ಇತ್ಯರ್ಥವಾಗದೇ ಇದ್ದರೆ ನಾಳೆಯಿಂದ ಖಾಸಗೀ ಚಾಲಕರು ಹಾಗೂ ನಿರ್ವಾಹಕರಿಂದಲೇ ಬಸ್ ಓಡಿಸಲು ಸಾರಿಗೆ ಇಲಾಖೆ ಪ್ಲ್ಯಾನ್ ಹಾಕಿದೆ ಎಂಬ ಮಾಹಿತಿ ಇದೆ.

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಅನಾನುಕೂಲ ಹೆಚ್ಚಾಗುತ್ತಿದೆ‌. ಬಸ್ಸಿಲ್ಲದೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದಾರೆ‌. ಈ ಎಲ್ಲ ಸಮಸ್ಯೆಯನ್ನರಿತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಅದಾಗ್ಯೂ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಎಸ್ಮಾ (essential service maintenance act)ಕಾಯ್ದೆ ಹಾಕುವುದಾಗಿ ಎಚ್ಚರಿಸಿದೆ. ಸದ್ಯ ಪ್ರತಿಭಟನೆಯನ್ನು ತಣ್ಣಗಾಗಿಸಲು ಸರ್ಕಾರ ಈ ಎರಡು ಮಾರ್ಗಗಳನ್ನು ರೂಪಿಸಿದೆ ಎಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

12/12/2020 09:13 am

Cinque Terre

54.21 K

Cinque Terre

2