ಮಂಗಳೂರಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಮ್ಮದ್ ಶಾರೀಕ್, ಮಾಜ್ ಮುನೀರ್ ಅಹ್ಮದ್, ಬಂಧಿತರು. ಇವರಲ್ಲಿ ಬಂಧಿತ ತೀರ್ಥಹಳ್ಳಿಯ ಶಾರೀಕ್
ಬಿ.ಕಾಂ ವಿದ್ಯಾರ್ಥಿ. ಇನ್ನೋರ್ವ ಬಂಧಿತ ತೀರ್ಥಹಳ್ಳಿಯ ಮಾಜ್ ಎಂಬಾತ ಕೂಡಾ ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ.
ಇವರ ವಿರುದ್ಧ ಮಂಗಳೂರಿನ ಕದ್ರಿ ಮತ್ತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು. ಈ ಆರೋಪಿಗಳು ಮೊದಲು ಬಂದರು ಠಾಣಾ ವ್ಯಾಪ್ತಿಯ ಕೋರ್ಟ್ ರಸ್ತೆಯಲ್ಲಿ ಬರೆದಿದ್ದರು. ಇದನ್ನು ಯಾರೂ ನೋಡಿರಲಿಲ್ಲ. ಹೀಗಾಗಿ ಕದ್ರಿ ರಸ್ತೆಯಲ್ಲಿನ ಪ್ಲಾಟ್ ನ ಗೋಡೆಯಲ್ಲಿ ಬರೆದಿದ್ದಾರೆ. ಇದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಪೊಲೀಸರಿಗೂ ಗೊತ್ತಾಗಿದೆ ಅಂದರು. ಆರೋಪಿ ಶಾರೀಕ್ ತೀರ್ಥಹಳ್ಳಿಯ ತನ್ನ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಮಾಜ್ ಅಂತಿಮ ವರ್ಷದ ಎಂ.ಟೆಕ್ ಮಾಡಿಕೊಂಡು ಮಂಗಳೂರಲ್ಲಿ ಆನ್ ಲೈನ್ ಫುಡ್ ಡೆಲಿವರಿ ಮಾಡ್ತಿದ್ದ. ಮೇಲ್ನೋಟಕ್ಕೆ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಅಂತ ಗೊತ್ತಾಗಿದೆ. ಇದರ ಹಿಂದೆ ಯಾವ ಉದ್ದೇಶ ಇದೆ ಅನ್ನೋದರ ಬಗ್ಗೆ ತನಿಖೆಯಾಗ್ತಿದೆ ಇಬ್ಬರು ಆರೋಪಿಗಳು ಕೂಡ ಒಂದೇ ಊರಿನವರಾಗಿದ್ದು, ಬಹಳಷ್ಟು ಪರಿಚಯವಿತ್ತು. ಸದ್ಯಕ್ಕೆ ಇವರ ಯಾವುದೇ ಅಪರಾಧ ಹಿನ್ನೆಲೆ ಮತ್ತು ಸಂಘಟನೆ ನಂಟಿನ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಾ ಇದ್ದೇವೆ. ನಮ್ಮ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡ್ತೇವೆ ಅಂದರು.
PublicNext
05/12/2020 08:10 pm