ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಿ.5 ರಂದು ಎಲ್ಲಾ ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ನಡೆಯುತ್ತೆ: ಬೊಮ್ಮಾಯಿ

ಉಡುಪಿ: ಬಂದ್ ಮಾಡಬಾರದು ಎಂದು ಸುಪ್ರೀಂ ಸ್ಪಷ್ಟ ಆದೇಶ ಇದೆ.ಬಂದ್ ಮಾಡಿದ್ರೆ ಸುಪ್ರೀಂ ಆದೇಶ ಉಲ್ಲಂಘನೆ ಆಗುತ್ತೆ.

ಬಂದ್ ಮಾಡಬೇಡಿ ಎಂದು ಸಿಎಂ ಜೊತೆ ನಾನೂ ಮನವಿ ಮಾಡ್ತೇನೆ.ಇಷ್ಟರ ಮೇಲೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು,ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ.ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.ಹೊಸ ವರ್ಷಾಚರಣೆ ಸಂಬಂಧ ಇವತ್ತು ಅಥವಾ ನಾಳೆ ಸರ್ಕಾರ ಒಂದು ತೀರ್ಮಾನ ಮಾಡುತ್ತದೆ.ನೈಟ್ ಕರ್ಪ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ.

ಹೊಸ ವರ್ಷಾಚರಣೆಯಲ್ಲಿ ಜನ ಸಂದಣಿ ಆಗದಂತೆ ನೋಡುವ ಜವಾಬ್ದಾರಿ ಇದೆ.ನೈಟ್ ಕರ್ಪ್ಯೂ ಹೊರತಾಗಿಯೂ ಕ್ರಮ‌ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಕೆ.ಜೆ.ಹಳ್ಳಿ ಪ್ರಕರಣದಲ್ಲಿ ಜಾಕಿರ್ ಬಂಧನ ವಿಚಾರವಾಗಿ ಮಾತನಾಡಿದ ಅವರು,ಹೌದು, ಜಾಕಿರ್ ಬಂಧನ ಆಗಿದೆ.ಇವತ್ತು ರಜೆ ಇದೆ, ನಾಳೆ ನ್ಯಾಯಾಲಯಕ್ಕೆ ಹಾಜರು ಮಾಡ್ತೇವೆ.ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದರು.

Edited By : Manjunath H D
PublicNext

PublicNext

03/12/2020 12:24 pm

Cinque Terre

70.83 K

Cinque Terre

5

ಸಂಬಂಧಿತ ಸುದ್ದಿ