ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ರಾಜ್ಯಾದ್ಯಂತ ಮಸೀದಿಗಳಲ್ಲಿರುವ ಅನಧಿಕೃತ ಧ್ವನಿವರ್ಧಕ ತೆರವುಗೊಳಿಸಿ'

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ವಕೀಲರಾದ ಹರ್ಷ ಮುತಾಲಿಕ್ ಅವರು ಕಳೆದ ತಿಂಗಳು ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು. 'ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗತ್ತೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ' ಎಂದು ದೂರಿದ್ದರು.

ಹರ್ಷ ಮುತಾಲಿಕ್ ಅವರ ದೂರಿಗೆ ಸ್ಪಂದಿಸಿದ ಡಿಜಿ ಪ್ರವೀಣ್ ಸೂದ್ ಅವರು, ರಾಜ್ಯದ ಎಲ್ಲ ಜಿಲ್ಲೆಗಳ ಎಸ್‍ಪಿಗಳಿಗೆ ಹಾಗೂ ನಗರದ ಕಮಿಷನರ್‌ಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಅನಧಿಕೃತ ಧ್ವನಿವರ್ಧಕ ಬಳಕೆ ಮಾಡಿದ್ದರೆ, ಅದರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

Edited By : Vijay Kumar
PublicNext

PublicNext

05/11/2020 08:11 pm

Cinque Terre

124.42 K

Cinque Terre

58

ಸಂಬಂಧಿತ ಸುದ್ದಿ