ಕೊಪ್ಪಳ- ಹೊಟೇಲ್‌ನಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಆಗಿ ಭಾರೀ ಅನಾಹುತ ತಪ್ಪಿದೆ. ಹೋಟೆಲ್ ಹಾಗೂ ಟೀ ಪಾಯಿಂಟ್ ಹೊತ್ತಿ ಊರಿದಿದೆ.ಇನ್ನು ಈ ಘಟನೆ ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ನಡೆದಿದೆ. ಹೋಟೆಲ್ ಹಾಗೂ ಟೀ ಪಾಯಿಂಟ್ ಸುಟ್ಟು ಕರಕಲಾಗಿದೆ. ಹೋಟೆಲ್ ಮುಂಭಾಗವಿದ್ದ ಬೈಕ್ ಕೂಡ ಸುಟ್ಟು ಕರಕಲಾಗಿದೆ. ರಾತ್ರಿ ಹೋಟೆಲ್‌ನಲ್ಲಿದ್ದ ಸಿಬ್ಬಂದಿ ಸರಿಯಾಗಿ ಸಿಲಿಂಡರ್ ಆಫ್ ಮಾಡದೆ ಇರೋದ್ರಿಂದ ಈ ಘಟನೆ ನಡೆದಿದೆ. ಹೋಟೆಲ್‌ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕೆಲಸ ಮುಂದುವರೆದಿದೆ. ಸದ್ಯ ಹೋಟೆಲ್ ಮೇಲ್ಭಾಗದಲ್ಲಿ ವಾಸ ಮಾಡ್ತಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಹೋಟೆಲ್ ಮೇಲ್ಭಾಗ ಎರಡು ಮನೆಗಳಿವೆ. ಮನೆಯಲ್ಲಿದ್ದವರ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದಾರೆ. ಬೆಳ್ಳಂಬೆಳಗ್ಗೆ ಜನನಿಬಿಡ ಪ್ರದೇಶದಲ್ಲಿರೋ ಹೋಟೆಲ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ರಿಂದ ಜನರು ಆತಂಕಕ್ಕೆ ಒಳಗಾಗಿದ್ದರು.
PublicNext
24/08/2022 12:00 pm