ಲಕ್ನೊ: ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಬಾಬರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣದ ತೀರ್ಪು ಇನ್ನು ಕೆಲವೇ ಹೊತ್ತಿನಲ್ಲಿ ಹೊರಬರಲಿದ್ದು, ಅನಾರೋಗ್ಯದ ಹಿನ್ನೆಲೆ ಅಡ್ವಾಣಿ ಹಾಗೂ ಜೋಷಿ ನ್ಯಾಯಾಲಯಕ್ಕೆ ಹಜರಾಗೋದ್ರಿಂದ ವಿನಾಯಿತಿ ನೀಡಲಾಗಿದ್ದು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಇಂದು ನ್ಯಾಯಾಲಯ ಮುಂದೆ ಹಾಜರಾಗುವುದಿಲ್ಲ ಎಂದು ತಿಳಿದುಬಂದಿದೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯವು 28 ವರ್ಷಗಳ ಹಿಂದಿನ ಪ್ರಕರಣದ ತೀರ್ಪನ್ನು ಇಂದು ಪ್ರಕಟಿಸಲು ನಿರ್ಧರಿಸಿದ್ದು, ಕೆಲವೇ ಕ್ಷಣಗಳಲ್ಲಿ ತೀರ್ಪು ಹೊರಬೀಳಲಿದೆ, ತೀರ್ಪು ಹೊರಬರುವ ಸಂದರ್ಭದಲ್ಲಿ ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯದ ಎದುರು ರಾಮ ಜನ್ಮಭೂಮಿ ನ್ಯಾಸ ಮುಖ್ಯಸ್ಥ ನೃತ್ಯ ಗೋಪಾಲ ದಾಸ್ ಅವರು ಕೂಡ ಗೈರಾಗಲಿದ್ದಾರೆ ಎಂದು ಅವರ ಪರ ನ್ಯಾಯಾಧೀಶ ಕೆ ಕೆ ಮಿಶ್ರಾ ತಿಳಿಸಿದ್ದಾರೆ.
ಇತರ ಆರೋಪಿಗಳಾದ ವಿನಯ್ ಕತಿಯಾರ್, ಧರಮ್ ದಾಸ್, ವೇದಾಂತಿ, ಲಲ್ಲು ಸಿಂಗ್, ಚಂಪತ್ ರೈ ಮತ್ತು ಪವನ್ ಪಾಂಡೆ ಲಕ್ನೊಗೆ ಆಗಮಿಸಿ ಅವರು ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.
PublicNext
30/09/2020 12:02 pm