ಬೇಕಾಗುವ ಸಾಮಗ್ರಿ :
2 ಚಮಚ ಎಣ್ಣೆ, 2 ಚಮಚ ಶೇಂಗಾ, 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡ್ಲೆಬೇಳೆ, ಅರ್ಧ ಚಮಚ ಜೀರಿಗೆ, ಚಿಟಿಕೆ ಇಂಗು, ನಾಲ್ಕಾರು ಕರಿಬೇವಿನ ಎಲೆ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, 1 ಇಂಚಿನಷ್ಟು ಗಾತ್ರದ ಶುಂಠಿ ಸಣ್ಣಗೆ ಹೆಚ್ಚಿದ್ದು, ಸಣ್ಣಗೆ ಹೆಚ್ಚಿದ 2 ಟೊಮೆಟೋ, ಕಾಲು ಚಮಚ ಅರಿಶಿನ, ಮುಕ್ಕಾಲು ಚಮಚ ಅಚ್ಚ ಖಾರದ ಪುಡಿ, 1 ಚಮಚ ಉಪ್ಪು, ಎರಡೂವರೆ ಕಪ್ ಅನ್ನ, 2 ಚಮಚ ತೆಂಗಿನ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿದ್ದು.
ಮಾಡುವ ವಿಧಾನ :
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಶೇಂಗಾವನ್ನು ಹುರಿದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ನಂತರ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಚಮಚ ಜೀರಿಗೆ, ಚಿಟಿಕೆ ಇಂಗು, ಕರಿಬೇವಿನ ಎಲೆಯನ್ನು ಹಾಕಿ. ಇದು ಚಟಪಟಗೊಂಡ ಬಳಿಕ ಹೆಚ್ಚಿದ ಈರುಳ್ಳಿ, ಶುಂಠಿ ಹಾಕಿ. ಅದು ಸ್ವಲ್ಪ ಬಾಡಿದ ಮೇಲೆ ಹೆಚ್ಚಿದ ಟೊಮೆಟೋ ಹಾಕಿ ಒಂದು ನಿಮಿಷ ಹುರಿದು ಮುಚ್ಚಳ ಮುಚ್ಚಿ.
ಟೊಮೆಟೋ ಪೂರ್ತಿ ಬೆಂದು ಕರಗಿದ ಮೇಲೆ ಅರಿಶಿನ, ಅಚ್ಚ ಖಾರದ ಪುಡಿ, ಉಪ್ಪು ಬೆರೆಸಿ ಎಲ್ಲವನ್ನೂ ಮಿಕ್ಸ್ ಮಾಡಿ. ನಂತರ ಅನ್ನ ಹಾಕಿ ಕಲಸಿ 5 ನಿಮಿಷ ಸಣ್ಣ ಉರಿಯಲ್ಲಿ ಹಾಗೇ ಮುಚ್ಚಿಡಿ. ಗ್ಯಾಸ್ ಆಫ್ ಮಾಡಿ ಬಾಣಲೆಯನ್ನು ಕೆಳಕ್ಕಿಳಿಸಿದ ಮೇಲೆ ತೆಂಗಿನ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದ್ರೆ ಟೊಮೆಟೊ ಚಿತ್ರಾನ್ನ ರೆಡಿ.
PublicNext
30/05/2022 03:47 pm