ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂದಲು ಸೊಂಪಾಗಿ ಬೆಳೆಯಲು ಈ ಟಿಪ್ಸ್ ಫಾಲೋ ಮಾಡಿ

ಇತ್ತೀಚೆಗೆ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ಕೂದಲು ಬಲವಾಗಿ ಬೆಳೆಯುವುದಿಲ್ಲ ಅನ್ನೋದು ಎಲ್ಲರ ದೂರು. ಕೆಲವೊಂದು ಚಿಕ್ಕಪುಟ್ಟ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ನೀವು ಕೂಡ ದಟ್ಟವಾದ ಉದ್ದ ಕೂದಲನ್ನು ಹೊಂದಬಹುದು.

ನೆತ್ತಿಯನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ. ಕೂದಲಿಗೆ ಶಾಂಪೂ ಹಾಕುವಾಗ ನಿಧಾನವಾಗಿ ಸ್ಕಾಲ್ಪ್ ಗೆ ಮಸಾಜ್ ಮಾಡಿ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸರಿಯಾದ ಆಹಾರ ತೆಗೆದುಕೊಳ್ಳದೇ ಇದ್ರೆ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ.

ನಿಮ್ಮ ಆಹಾರದಲ್ಲಿ ಕಾಲಜನ್ ಮತ್ತು ಬುಟೊಟಿನ್ ನಂತಹ ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕು. ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಹೇರ್ ವಾಶ್ ಮಾಡುವ ಮೊದಲು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಬೇಕು. ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಹಚ್ಚಬಹುದು.

ಇದಲ್ಲದೆ ಮೂರು ತಿಂಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡುವುದು ಸಹ ಅಗತ್ಯವಾಗಿದೆ. ಒದ್ದೆಯಾದ ಕೂದಲನ್ನು ಬಾಚಿಕೊಳ್ಳಬೇಡಿ. ಇದು ನಿಮಗೆ ಸಮಸ್ಯೆ ಉಂಟುಮಾಡಬಹುದು. ಈ ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ತಂತಾನೇ ಕೂದಲು ಚೆನ್ನಾಗಿ ಬೆಳೆಯುತ್ತದೆ.

Edited By : Nirmala Aralikatti
PublicNext

PublicNext

30/05/2022 03:38 pm

Cinque Terre

17.27 K

Cinque Terre

0