1 ಗ್ಲಾಸ್ ರಾಗಿಹಿಟ್ಟಿಗೆ 5 ಲೋಟ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ತಿರುಗಿಸಿ. ನಂತರ ಅದಕ್ಕೆ ½ ಟೀ ಸ್ಪೂನ್ ಉಪ್ಪು, ½ ಟೀ ಸ್ಪೂನ್ ಜೀರಿಗೆ, 2 ಚಮಚದಷ್ಟು ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈ ರಾಗಿ ಮಿಶ್ರಣವನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ತಿರುಗಿಸಿ. 3 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಅದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
ನಂತರ ಒಂದು ಗ್ಲಾಸ್ ಗೆ 2 ಟೇಬಲ್ ಸ್ಪೂನ್ ನಷ್ಟು ಅಂಬಲಿ ಹಾಕಿ ನಂತರ ಸ್ವಲ್ಪ ಹಸಿ ನೀರುಳ್ಳಿ, ಬೇಕಿದ್ದರೆ ಹಸಿಮೆಣಸು, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ 2 ದೊಡ್ಡ ಚಮಚದಷ್ಟು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಿರಿ ಇದು ದೇಹಕ್ಕೆ ತಂಪು.
PublicNext
04/03/2022 03:55 pm