ವಿಪರೀತ ಧೂಮಪಾನ ಹಾಗೂ ದೇಹದಲ್ಲಿಯ ಉಷ್ಣತೆ ಪ್ರಮಾಣ ಹೆಚ್ಚುವುದರಿಂದಲೂ ಮುಖದ ಮೇಲೆ ನೆರಿಗೆಗಳು ಮೂಡುತ್ತವೆ.
ಇದನ್ನು ಹೋಗಲಾಡಿಸುವ ಮನೆಮದ್ದುಗಳು ಇಲ್ಲಿವೆ ನೋಡಿ..
ಒಂದು ತಟ್ಟೆಗೆ ಒಂದು ಚಮಚ ಜೇನು ಹಾಗೂ ಒಂದು ಚಮಚ ಕ್ಯಾರೆಟ್ ರಸ ಬೆರೆಸಿ. ಈ ಮಿಶ್ರಣವನ್ನು ನೆರಿಗೆ ಮೂಡಿರುವ ಭಾಗಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಮುಖವನ್ನು ತೊಳೆಯಿರಿ.
ಬೆಚ್ಚಗಿನ ನೀರಿಗೆ ಅಡುಗೆ ಸೋಡಾವನ್ನು ಬೆರೆಸಿ. ಕಾಟನ್ ಬಟ್ಟೆಯಿಂದ ಅದನ್ನು ಮುಖಕ್ಕೆ ಲೇಪಿಸಿ. ಐದಾರು ಬಾರಿ ಹೀಗೆ ಮಾಡಿದ ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ಒರೆಸಿ ಕ್ಲೀನ್ ಮಾಡಿ. ಇದರಿಂದಲೂ ಮುಖದ ನೆರಿಗೆ ದೂರವಾಗುತ್ತದೆ.
ಜೇನುತುಪ್ಪಕ್ಕೆ ಕಾಲು ಚಮಚ ಗ್ಲಿಸರಿನ್ ಹಾಕಿಯೂ ಇದನ್ನು ಪ್ರಯತ್ನಿಸಬಹುದು. ಈ ಪೇಸ್ಟ್ ಅನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿ ಬೆಳಗ್ಗೆದ್ದು ಮುಖ ತೊಳೆದರೆ ಸಾಕು, ಯಾವುದೇ ನೆರಿಗೆ ಮುಖದಲ್ಲಿ ಮೂಡಲು ಇದು ಬಿಡುವುದಿಲ್ಲ. ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ನೆರಿಗೆ ಸಮಸ್ಯೆ ದೂರವಾಗಿ ಮುಖ ಕಾಂತಿ ಹೆಚ್ಚುತ್ತದೆ.
PublicNext
13/02/2022 02:43 pm