ಮನೆಯಲ್ಲಿಯೇ ರುಚಿಕರವಾದ ಚಿಕನ್ 65 ಮಾಡುವ ವಿಧಾನ ಇಲ್ಲಿದೆ ನೋಡಿ.
ಚಿಕನ್ -20 ಪೀಸ್, 1 ಟೇಬಲ್ ಚಮಚ-ಖಾರದಪುಡಿ, 1 ಟೀ ಸ್ಪೂನ್-ಅರಿಶಿನಪುಡಿ, 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್-ಗರಂ ಮಸಾಲ, ಲಿಂಬೆ ಹಣ್ಣಿಸ ರಸ-1 ಚಮಚ, 1-ಟೇಬಲ್ ಸ್ಪೂನ್-ಅಕ್ಕಿ ಹಿಟ್ಟು, 1 ಟೇಬಲ್ ಸ್ಪೂನ್-ಕಾರ್ನ್ ಫ್ಲೋರ್, 1-ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ-ಕರಿಯಲು.
ಮೊದಲಿಗೆ ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದಕ್ಕೆ ಖಾರದಪುಡಿ, ಅರಿಶಿನ ಪುಡಿ, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಲಿಂಬೆ ಹಣ್ಣಿನ ರಸ, ಮೊಟ್ಟೆ, ಅಕ್ಕಿಹಿಟ್ಟು, ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಕೋಳಿ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಮ್ಯಾರಿನೇಟ್ ಮಾಡುವುದಕ್ಕೆ ಇಟ್ಟು ಬಿಡಿ.
ನಂತರ ಗ್ಯಾಸ್ ಮೇಲೆ ಎಣ್ಣೆ ಬಾಣಲೆಯಲ್ಲಿಟ್ಟು ಅದಕ್ಕೆ ಮ್ಯಾರಿನೇಟ್ ಮಾಡಿಟ್ಟುಕೊಂಡ ಚಿಕನ್ ಪೀಸ್ ಗಳನ್ನು ಹಾಕಿ ಚೆನ್ನಾಗಿ ಕರೆದು ರಿಯಿರಿ ಸರ್ವ್ ಮಾಡಿ.
PublicNext
09/02/2022 05:00 pm