ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಖದ ‘ಕಾಂತಿ’ ಗೆ ಅಕ್ಕಿಹಿಟ್ಟು

ಮುಖದ ಸೌಂದರ್ಯ ಹೆಚ್ಚಿಸಲು ಮನೆಯಲ್ಲಿಯೇ ಇದಕ್ಕೆ ಪರಿಹಾರವಿದೆ. ಅಕ್ಕಿ ಹಿಟ್ಟಿನಿಂದ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಒಂದು ಚಮಚ ಅಕ್ಕಿಹಿಟ್ಟಿನಲ್ಲಿ ಸ್ವಲ್ಪ ಹಾಲು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಒಣಗುವ ವರೆಗೆ ಬಿಡಿ. ಬಳಿಕ ನಿಧಾನವಾಗಿ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ನಾಲ್ಕು ಚಮಚ ಅಕ್ಕಿ ಹಿಟ್ಟಿಗೆ ಚಿಟಿಕೆ ಅರಿಷಿಣ, ಮೂರು ಹನಿ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.

ಈ ರೀತಿ ಅಕ್ಕಿ ಹಿಟ್ಟಿನ ವಿಧಾನದಿಂದಾಗಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟಿನಲ್ಲಿ ವಿಟಮಿನ್ ಡಿ ಇದ್ದು, ಅದು ಮುಖದಲ್ಲಿ ಹೊಸ ಕೋಶಗಳ ಉತ್ಪತ್ತಿ ಮಾಡುತ್ತದೆ ಮಾತ್ರವಲ್ಲ. ಮುಖ ಸುಕ್ಕಾಗುವುದನ್ನು ತಡೆಯುತ್ತದೆ. ಅಲ್ಲದೇ ಮುಖದಲ್ಲಿನ ಅಧಿಕ ಎಣ್ಣೆ ಅಂಶವನ್ನು ನಿವಾರಿಸಿ, ಕಾಂತಿಯುತ ತ್ವಚೆಯನ್ನಾಗಿ ಮಾಡುತ್ತದೆ.

Edited By : Nirmala Aralikatti
PublicNext

PublicNext

02/02/2022 10:28 am

Cinque Terre

25.65 K

Cinque Terre

0