ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲವೇ ನಿಮಿಷಗಳಲ್ಲಿ ಮಾಡಿ ದಿಢೀರ್ ಬೆಂಡೆ ಬೈಟ್ಸ್

ಊಟದ ಜೊತೆ ಏನಾದರೂ ಕುರುಕುಲು ಬೇಕೆನಿಸಿದಾಗ ಬೆಂಡೆ ಬೈಟ್ಸ್ ಮಾಡಿಕೊಳ್ಳಬಹುದು. ಮನೆಗೆ ನೆಂಟರು ಬಂದಾಗ ದಿಢೀರನೇ ಮಾಡಿಕೊಡಬಹುದು. ತುಂಬಾ ರುಚಿಯಾಗಿರುತ್ತದೆ ಮತ್ತು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಕೇವಲ ಊಟದ ಜೊತೆ ಅಷ್ಟೇ ಅಲ್ಲದೇ ಸಂಜೆ ಚಹ ಸಮಯಕ್ಕೂ ಮಾಡಿಕೊಳ್ಳಬಹುದು. ಇದನ್ನು ಮಾಡಲು ಕಡಿಮೆ ಸಾಮಗ್ರಿಗಳು ಸಾಕು. ಬೆಂಡೆಕಾಯಿಗೆ ಮಸಾಲೆಗಳನ್ನು ಹಾಕಿ, ಮೇಲೆ ಮೈದಾಹಿಟ್ಟು ಮತ್ತು ಬ್ರೆಡ್ ಪುಡಿ ಕೋಟಿಂಗ್ ಮಾಡಿ ಎಣ್ಣೆಯಲ್ಲಿ ಕರಿದರೆ ಆಗುವುದೇ ಗರಿ ಗರಿಯಾದ ಬೆಂಡೆ ಬೈಟ್ಸ್. ಬನ್ನಿ ಬೇಗ ಬೆಂಡೆಕಾಯಿ ಬೈಟ್ಸ್ ಮಾಡಿ, ಅದರ ರುಚಿ ಸವಿಯೋಣ.

Edited By : Vijay Kumar
PublicNext

PublicNext

14/01/2022 05:48 pm

Cinque Terre

47.55 K

Cinque Terre

0