ಈಗಿನ ದಿನಗಳಲ್ಲಿ ದೋಸೆಗಳಲ್ಲಿ ತುಂಬಾ ವಿಧಗಳು ಬಂದಿವೆ. ಕೆಲವೇ ಸಾಮಾಗ್ರಿಗಳ ವ್ಯತ್ಯಾಸ ಮಾಡಿ ಹೊಸ ಹೊಸ ಬಗೆಯ ದೋಸೆಗಳನ್ನು ಮಾಡಬಹುದು. ಸಾಮಾನ್ಯವಾಗಿ ಎಲ್ಲರೂ ಮಾಡುವ ದೋಸೆ ಎಂದರೆ ಅಕ್ಕಿಯಿಂದ ಮಾಡುವ ದೋಸೆ. ಇದಕ್ಕೆ ಹಿಟ್ಟು ಹುಳಿಯಾಗಲು ರಾತ್ರಿಯಿಡಿ ಇಡಬೇಕಾಗುತ್ತದೆ. ಹಾಗು ಕೆಲವೊಮ್ಮೆ ಇದರಿಂದ ಎದೆ ಉರಿಯು ಉಂಟಾಗುತ್ತದೆ. ಆದ್ದರಿಂದ ಹುಳಿಯಾಗಲು ಬಿಡದೇ ದಿಢೀರನೆ ಮಾಡಿಕೊಳ್ಳಬಹುದಾದಂತಹ ದೋಸೆ ಎಂದರೆ ಅದುವೇ ಹೆಸರು ಬೇಳೆ ದೋಸೆ. ಈ ದೋಸೆ ಮಾಡಲು ಹೆಸರು ಬೇಳೆಯನ್ನು ಎರಡು ಗಂಟೆ ನೆನೆಸುವುದು ಬಿಟ್ಟರೆ, ಬೇರೆಲ್ಲಾ ಕೆಲಸವು ಬೇಗ ಆಗುತ್ತದೆ.
ಹೆಸರು ಬೇಳೆ ಆರೋಗ್ಯಕ್ಕು ಕೂಡ ಒಳ್ಳೆಯದು. ಇದು ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ಈ ದೋಸೆಯ ರುಚಿಯು ಕೂಡ ವಿಭಿನ್ನವಾಗಿರುತ್ತದೆ. ದೋಸೆ ಮಾಡುವಾಗ ಹಸಿ ಮೆಣಸಿನಕಾಯಿ ಹಾಗು ಶುಂಠಿಯನ್ನು ಹಿಟ್ಟಿಗೆ ಹಾಕಿ ರುಬ್ಬುವುದರಿಂದ ಒಳ್ಳೆಯ ರುಚಿ ಬರುತ್ತದೆ. ಈ ದೋಸೆಯು ಶುಂಠಿ ಚಟ್ನಿ ಅಥವಾ ಕಾಯಿ ಚಟ್ನಿ ಜೊತೆ ತುಂಬಾ ಚೆನ್ನಾಗಿರುತ್ತದೆ. ದೋಸೆಗೆ ತುಪ್ಪ ಅಥವಾ ಬೆಣ್ಣೆ ಹಾಕಿ, ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗು ಕೊತ್ತಂಬರಿ ಸೊಪ್ಪು ಹಾಕುವುದರಿಂದ, ಇದರ ರುಚಿ ಇಮ್ಮಡಿಯಾಗುತ್ತದೆ. ಬನ್ನಿ ಹಾಗಾದರೆ ಇನ್ನೇಕೆ ತಡ, ಬೇಗ ಹೆಸರು ಬೇಳೆ ದೋಸೆ ಮಾಡುವ ವಿಧಾನವನ್ನು ನೋಡೋಣ.
PublicNext
12/12/2021 11:25 am