ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲಂಗಿ ಪನೀರ್ ಪರಾಠಾ ಮಾಡುವ ವಿಧಾನ

ತರಕಾರಿ ತಿನ್ನಲಾರದ ಮಕ್ಕಳಿಗೆ ಅವುಗಳನ್ನು ಬಳಸಿ ಪರಾಠಾ ಮಾಡಿ ಕೊಟ್ಟರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ತರಕಾರಿಯ ಪೋಷಕಾಂಶಗಳು ಮಕ್ಕಳಿಗೆ ದೊರೆಯುತ್ತದೆ. ಅದೇ ರೀತಿ ಅವರಿಷ್ಟದ ಅಭಿರುಚಿಗೆ ತಕ್ಕಂತೆ ಮಾಡಿಕೊಟ್ಟಂತೆಯೂ ಆಗುತ್ತದೆ. ನಾವು ಸಾಮಾನ್ಯವಾಗಿ ಮೂಲಂಗಿಯಿಂದ ಪಚಡಿ ಹಾಗೂ ಸಾರು ಮಾಡುತ್ತೇವೆ. ಆದರೆ ಪರಾಠಾ ಮಾಡುವುದು ಕಡಿಮೆ. ಇದರಲ್ಲಿ ನಾವು ಮೂಲಂಗಿಯ ಜೊತೆ ಪನೀರ್ ಹಾಕುವುದರಿಂದ ವಿಭಿನ್ನವಾಗಿ ಹಾಗು ರುಚಿಯಾಗಿ ಇರುತ್ತದೆ.

ಇದನ್ನು ನಾವು ಬೆಳಗಿನ ಉಪಹಾರಕ್ಕೆ, ಮಧ್ಯಾಹ್ನದ ಊಟಕ್ಕೆ ಮಾಡಿಕೊಳ್ಳಬಹುದು. ಕೆಲಸಕ್ಕೆ ಹೋಗುವವರಿಗೆ ಹಾಗೂ ಮಕ್ಕಳ ಊಟದ ಡಬ್ಬಿಗೂ ಕೂಡ ಹಾಕಿ ಕೊಡಬಹುದು. ಕೆಲವು ಜನ ಮೂಲಂಗಿ ಇಷ್ಟಪಡುವುದಿಲ್ಲ. ಅಂತಹವರಿಗೆ ಕೂಡ ಈ ಪರಾಠಾ ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಬಿಸಿಯಿರುವಾಗ ಬೆಣ್ಣೆ ಜೊತೆ ಅಥವಾ ಮೊಸರಿನ ಜೊತೆ ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿಯೇ ಮಸಾಲೆಗಳು ಇರುವುದರಿಂದ ಯಾವ ಚಟ್ನಿಯ ಅವಶ್ಯಕತೆಯು ಇರುವುದಿಲ್ಲ. ಇನ್ನೇನು ಯೋಚಿಸುತ್ತಿರಿ? ಬೇಗ ಮೂಲಂಗಿ ಪನೀರ್ ಪರಾಠಾ ಮಾಡೋಣ ಬನ್ನಿ.

Edited By : Vijay Kumar
PublicNext

PublicNext

10/12/2021 11:25 am

Cinque Terre

22.84 K

Cinque Terre

0