ಹೋಟೆಲಿಗೆ ಹೋದಾಗ ಊಟಕ್ಕೆ ಮುಂಚೆ ಏನಾದರೂ ಸ್ಟಾರ್ಟರ್ ತಿನ್ನುವುದು ರೂಢಿ. ದಿನವೂ ಹೊರಗಡೆಯ ತಿನಿಸು ತಿನ್ನಲು ಆಗುವುದಿಲ್ಲ. ಆದ್ದರಿಂದ ಮನೆಯಲ್ಲಿಯೇ ಏನಾದರೂ ವಿಭಿನ್ನವಾಗಿ ಮಾಡಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಹಾಗಾದರೆ ಏನು ಮಾಡುವುದು ಅಂತೀರಾ? ಬನ್ನಿ ಇಂದು ನಾವು ಒಂದೇ ಮಸಾಲೆಯನ್ನು ಬಳಸಿ, ಎರಡು ಬಗೆಯ ತಿನಿಸು ಮಾಡುವುದನ್ನು ನೋಡೋಣ. ಅವುಗಳೆಂದರೆ, ಚಿಲ್ಲಿ ಗಾರ್ಲಿಕ್ ಮಶ್ರೂಮ್ ಮತ್ತು ಚಿಲ್ಲಿ ಗಾರ್ಲಿಕ್ ಪನೀರ್. ಈ ಮಸಾಲೆಯನ್ನು ಎರಡು ತಿನಿಸುಗಳಿಗೆ ಹಾಕಿ ಮಾಡಬಹುದು. ಇದರಲ್ಲಿ ಬೆಳ್ಳುಳ್ಳಿ, ಹುಣಸೆ ಹಣ್ಣು, ಬೆಲ್ಲ ಹಾಗು ಒಣ ಮೆಣಸಿನಕಾಯಿ ಇರುವುದರಿಂದ ಹುಳಿ, ಖಾರ ಸಿಹಿ ಎಲ್ಲವೂ ಸೇರಿ ತುಂಬಾ ರುಚಿಯಾಗಿರುತ್ತದೆ.
ಎರಡೂ ತಿನಿಸುಗಳನ್ನು ಮಾಡುವ ವಿಧಾನ ಕೂಡ ಒಂದೇ ರೀತಿ. ಆದರೆ ಕೇವಲ ಪನೀರ್ ಮತ್ತು ಮಶ್ರೂಮ್‌ಗಳ ವ್ಯತ್ಯಾಸ. ನೀವು ಮನೆಯಲ್ಲಿ ತಯಾರಿಸಿ ಕೊಡಿ. ಎಲ್ಲರೂ ಹೊಗಳುತ್ತಾರೆ , ಇನ್ನು ಮುಂದೆ ಹೋಟೆಲಿಗೆ ಹೋಗುವುದು ಬೇಡ ಎನ್ನುತ್ತಾರೆ. ಅಷ್ಟೊಂದು ರುಚಿಯಾಗಿರುತ್ತವೆ ಈ ಚಿಲ್ಲಿ ಗಾರ್ಲಿಕ್ ಮಶ್ರೂಮ್ ಮತ್ತು ಚಿಲ್ಲಿ ಗಾರ್ಲಿಕ್ ಪನೀರ್. ಮನೆಗೆ ನೆಂಟರು ಬಂದಾಗಲೂ ಸುಲಭವಾಗಿ ಮಾಡಿಕೊಡಬಹುದು. ಮಸಾಲೆ ಒಂದು ರುಬ್ಬಿಕೊಂಡರೆ ಆಯಿತು ಥಟ್ ಅಂತ ಇವುಗಳನ್ನು ತಯಾರಿಸಬಹುದು. ಮತ್ತೇನು ಯೋಚಿಸುತ್ತಿದ್ದೀರಾ? ಬನ್ನಿ ಬೇಗ ಇವುಗಳನ್ನು ಮಾಡುವ ವಿಧಾನವನ್ನು ತಿಳಿಯೋಣ.
PublicNext
04/12/2021 04:51 pm