ಬೆಳಗಾಗುತ್ತಿದ್ದಂತೆ ಉಪಹಾರಕ್ಕೆ ಏನು ಮಾಡುವುದು ಎನ್ನುವುದೇ ದೊಡ್ಡ ಚಿಂತೆ. ಕೇವಲ ಯಾವುದೋ ಒಂದು ತಿಂಡಿ ಮಾಡಿದರೆ ನಡೆಯುವುದಿಲ್ಲ. ಏಕೆಂದರೆ ಅದು ನಮಗೆ ಆಗೋಗ್ಯಕ್ಕೂ ಒಳ್ಳೆಯದಾಗಿರಬೇಕು. ಹಾಗಾದರೆ ಏನು ಮಾಡುವುದು ಎಂದು ತಿಳಿಯದಾದಾಗ ನಾವು ಒಂದು ವಿಶಿಷ್ಟವಾದ ಸಲಾಡ್ ತಯಾರಿಸಿಕೊಳ್ಳಬಹುದು. ಈ ಸಲಾಡ್ ಮಾಡಬೇಕಾದಾಗ, ನಾವು ಮಿಶ್ರ ಕಾಳುಗಳನ್ನು ರಾತ್ರಿ ಮಲಗುವಾಗ ನೆನೆಸಿಟ್ಟರೆ ಆಯಿತು. ಬೆಳಿಗ್ಗೆ ಕೇವಲ ಬೇಯಿಸಿ ಬೇರೆ ಎಲ್ಲಾ ಪದಾರ್ಥಗಳೊಂದಿಗೆ ಸೇರಿ ಕಲಸಿ ಮಾಡಿಕೊಳ್ಳಬಹುದು.
ಪ್ರತಿದಿನ ದೋಸೆ, ಇಡ್ಲಿ, ಉಪ್ಪಿಟ್ಟು ಇವೆಲ್ಲವೂ ಬೇಡ ಎನಿಸಿದಾಗ ವಿಭಿನ್ನವಾಗಿನಾವು ಈ ಸಲಾಡ್ ಮಾಡಬಹುದು. ಎಲ್ಲಾ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡರೆ, ಥಟ್ ಅಂತ ಬೇಗ ಮಾಡಿಕೊಳ್ಳಬಹುದು. ಇದರಲ್ಲಿ ನಾವು ದಾಳಿಂಬೆ, ಕಿತ್ತಳೆ, ಎಲೆ ಕೋಸು, ಮುಳ್ಳು ಸೌತೇಕಾಯಿ, ತುರಿದ ಗಜ್ಜರಿ, ನೆನೆಸಿದ ಬಾದಾಮಿ, ನೆನೆಸಿದ ಶೇಂಗಾ ಹಾಕುವುದರಿಂದ ಹಣ್ಣಿನ ಹಾಗೂ ತರಕಾರಿಗಳ ಪೋಷಕಂಶಗಳು ದೊರೆಯುತ್ತವೆ. ಇದಷ್ಟೇ ಅಲ್ಲದೆ ನಿಮಗಿಷ್ಟವಾದ ಹಣ್ಣು ಹಾಗೂ ತರಕಾರಿಗಳನ್ನು ಸೇರಿಸಿ ಮಾಡಿಕೊಳ್ಳಬಹುದು. ಇದಕ್ಕೆ ನಾವು ಚಾಟ್ ಮಸಾಲಾ, ನಿಂಬೆ ರಸ ಹಾಗೂ ಮೆಣಸಿನ ಪುಡಿ ಹಾಕುವುದರಿಂದ ಇನ್ನು ರುಚಿಯಾಗಿರುತ್ತದೆ. ಬನ್ನಿ ಹಾಗಾದರೆ ಈ ಸಲಾಡ್ ಮಾಡುವುದನ್ನು ಕಲಿಯೋಣ.
PublicNext
01/12/2021 09:16 pm