ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಡೆದ ತುಟಿಗಳಿಗೆ ಹೀಗೆ ಮಾಡಿ

ಚಳಿಗಾಲ ಬಂದಾಯ್ತು ಈಗಾ ಕೈ,ಕಾಲು,ತುಟಿ ಒಡೆಯುವುದು ಸಾಮಾನ್ಯ.. ಅದರಲ್ಲೂ ತುಟಿಗಳು ಒಡೆದರೆ ಮುಖದ ಕಾಂತಿಯೇ ಹಾಳಾಗುತ್ತದೆ. ಹಾಗಾಗಿ ತುಟಿಗಳು ಒಡೆದರೆ ಹೀಗೆ ಮಾಡಿ..

ರಾಸಾಯನಿಕಗಳ ಲಿಪ್ ಬಾಮ್ ಗಳನ್ನು ಹಚ್ಚುವ ಬದಲು ಹಾಲಿನ ಉತ್ಪನ್ನಗಳಾದ ಬೆಣ್ಣೆ ಹಾಗೂ ತುಪ್ಪವನ್ನು ತುಟಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ತುಟಿ ಒಡೆಯುವುದಿಲ್ಲ.ಇದರಿಂದ ಎರಡರಿಂದ ಮೂರು ದಿನಗಳೊಳಗೆ ನಿಮ್ಮ ತುಟಿ ಒಡೆಯುವ ಸಮಸ್ಯೆ ದೂರವಾಗುವುದು ಜೊತೆಗೆ ಆಕರ್ಷಕ ಗುಲಾಬಿ ಬಣ್ಣದ ತುಟಿ ನಿಮ್ಮದಾಗುತ್ತದೆ.

ನಿತ್ಯ ಮಲಗುವ ಮುನ್ನ ಕೊಬ್ಬರಿ ಎಣ್ಣೆಯಿಂದ ತುಟಿಗೆ ಮಸಾಜ್ ಮಾಡಿ ಇದರಿಂದ ತುಟಿ ಒಣಗುವ ಸಮಸ್ಯೆ ದೂರವಾಗುತ್ತದೆ. ತುಟಿ ಮೃದುವಾಗುತ್ತದೆ. ನಿತ್ಯ ಜೇನನ್ನು ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಹೆಚ್ಚುತ್ತದೆ.ತುಟಿಯ ಅಂದಕ್ಕೆ ಸಾಕಷ್ಟು ನೀರು ಕುಡಿಯಬೇಕು. ಚಳಿಗಾಲದಲ್ಲಿ ಬಾಯಾರಿಕೆ ಆಗುವುದು ಕಡಿಮೆಯಾದರೂ ಮರೆಯದೆ ನೀರು ಕುಡಿಯುತ್ತಿರಿ.

ಪೆಟ್ರೋಲಿಯಂ ಉತ್ಪನ್ನಗಳಾದ ವ್ಯಾಸಲಿನ್, ಬಯೊಲಿನ್ ನಂಥ ಉತ್ಪನ್ನಗಳನ್ನು ಬಳಸಿ. ಇದು ನಿಮ್ಮ ತುಟಿಗೆ ತೇವಾಂಶವನ್ನು ಒದಗಿಸುತ್ತದೆ.

Edited By : Nirmala Aralikatti
PublicNext

PublicNext

30/11/2021 12:10 pm

Cinque Terre

13.35 K

Cinque Terre

0