ತುಂಬಾ ಮೃದುವಾದ, ಸ್ವಾದಿಷ್ಟವಾದ ಪರೋಟ ಎಂದರೆ ಅದುವೇ ಬಾಳೆಹಣ್ಣಿನ ಪರೋಟ. ಇದರಲ್ಲಿ ಬೆಲ್ಲ ಮತ್ತು ಬಾಳೆ ಹಣ್ಣನ್ನು ಗೋಧಿ ಹಿಟ್ಟಿನಲ್ಲಿ ಕಲಸಿ, ಮಾಡುವುದರಿಂದ ಸಿಹಿಯಾಗಿ ತುಂಬಾ ಚೆನ್ನಾಗಿರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟವಾಗುತ್ತದೆ. ಇದು ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ತುಂಬಾ ಬೇಗ ಜೀರ್ಣವಾಗುತ್ತದೆ. ಇದನ್ನು ಲಟ್ಟಿಸುವಾಗ ತುಪ್ಪ ಸವರಿ ಎರಡು ಬಾರಿ ಮಡಚಿ ಮಾಡುತ್ತೇವೆ. ಆದ್ದರಿಂದ ಪರೋಟ ಪದರು ಪದರಾಗಿ ರುಚಿಯಾಗಿರುತ್ತದೆ.
PublicNext
23/11/2021 01:17 pm