ಮೀನು ಫ್ರೈ ಇದ್ದರೆ ಮಾಂಸಾಹಾರ ಪ್ರಿಯರಿಗೆ ಊಟ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸುಲಭವಾಗಿ ಜತೆಗೆ ಟೇಸ್ಟಿಯಾದ ಮೀನು ಫ್ರೈ ಮಾಡುವ ವಿಧಾನ ಇಲ್ಲಿದೆ ನೋಡಿ.
8 ಪೀಸ್-ಪಾಂಪ್ಲೆಟ್ ಮೀನು, 1 ಟೀ ಸ್ಪೂನ್-ಖಾರದಪುಡಿ, ½ ಟೀ ಸ್ಪೂನ್- ಅರಿಶಿನ ಪುಡಿ, 1 ಟೀ ಸ್ಪೂನ್-ಶುಂಠಿ ಬೆಳ್ಳುಳ್ಳಿ ಪೇಸ್ಟ್, 3-ಟೇಬಲ್ ಸ್ಪೂನ್ ಎಣ್ಣೆ, ಉಪ್ಪು-ರುಚಿಗೆ ತಕ್ಕಷ್ಟು, ½ ಕಪ್- ರವೆ.
ಮೊದಲಿಗೆ ಮೀನನ್ನು ಚೆನ್ನಾಗಿ 3 ಸಲ ತೊಳೆದು ಸ್ವಲ್ಪ ಉಪ್ಪು ಸೇರಿಸಿ ಹತ್ತು ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ಒಂದು ಅಗಲವಾದ ಪ್ಲೇಟ್ ಗೆ ಖಾರದಪುಡಿ, ಅರಿಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮೀನಿಗೆ ಹಚ್ಚಿ 10 ನಿಮಿಷಗಳ ಕಾಲ ಹಾಗೇಯೇ ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಸೇರಿಸಿ.
ರವೆಯನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು ಅದಕ್ಕೆ 1 ಟೀ ಸ್ಪೂನ್ ಖಾರದಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೀನಿನ ಪೀಸ್ ತೆಗೆದುಕೊಂಡು ರವೆಯ ಮಿಶ್ರಣದಲ್ಲಿ ಹೊರಳಾಡಿಸಿ ಪ್ಯಾನ್ ನಲ್ಲಿ ಹಾಕಿ ಶ್ಯಾಲೋ ಫ್ರೈ ಮಾಡಿ.
PublicNext
21/11/2021 03:24 pm