ಕಾಯಿ ಸಾಸಿವೆ ಚಿತ್ರಾನ್ನ ಹೆಸರೇ ಹೇಳುವಂತೆ ಕಾಯಿ ತುರಿ, ಸಾಸಿವೆಯಿಂದ ಮಾಡುವ ಚಿತ್ರಾನ್ನ. ಇದರಲ್ಲಿ ಮಸಾಲೆ ಮಾಡಿಕೊಡು ಅದನ್ನು ಅನ್ನಕ್ಕೆ ಕಲಸಿ ಮೇಲೆ ನಿಂಬೆ ರಸ ಸೇರಿಸುವುದರಿಂದ ಬೇರೆ ಚಿತ್ರಾನ್ನಗಳಿಗಿಂತಲೂ ವಿಭಿನ್ನವಾದ ರುಚಿಯನ್ನು ಕೊಡುತ್ತದೆ. ಮನೆಯಲ್ಲಿ ಪ್ರತಿ ನಿತ್ಯ ಅನ್ನ, ಸಾರು, ಪಲಾವು, ಬಿಸಿಬೇಳೆ ಬಾತ್ ಮಾಡಿ ಬೇಸರವಾದಾಗ ಈ ಚಿತ್ರಾನ್ನ ಮಾಡಿಕೊಳ್ಳಬಹುದು. ಇದರಲ್ಲಿರುವ ಸಾಸಿವೆಯ ಸುವಾಸನೆ ಎಂತಹವರನ್ನು ಸೆಳೆಯುತ್ತದೆ. ಇದನ್ನು ದಿಢೀರಾಗಿ ಮನೆಗೆ ಯಾರಾದರೂ ಬಂದಾಗ ಸುಲಭವಾಗಿ ಮಾಡಿಕೊಳ್ಳಬಹುದು. ಮಕ್ಕಳಿಗೆ ಅಥವಾ ಕೆಲಸಕ್ಕೆ ಹೋಗುವವರಿಗೆ ಮಧ್ಯಾಹ್ನದ ಊಟಕ್ಕೆ ಕೊಡಲು ಇದು ಸೂಕ್ತವಾಗಿದೆ. ಬನ್ನಿ ಹಾಗಾದರೆ ಕಾಯಿ ಸಾಸಿವೆ ಚಿತ್ರಾನ್ನ ಮಾಡುವುದನ್ನು ತಿಳಿಯೋಣ.
PublicNext
28/10/2021 03:25 pm