ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರುಚಿಕರವಾದ ಡ್ರೈ ಜಾಮೂನು

ಡ್ರೈ ಜಾಮೂನ ಮಾಡುವ ವಿಧಾನ

1 ಕಪ್ ಜಾಮೂನ್ ಪುಡಿ, ½ ಕಪ್ ಹಾಲು, ½ ಕಪ್-ಒಣಕೊಬ್ಬರಿ ಪುಡಿಗೆ 2ಏಲಕ್ಕಿ ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ, 1 ಟೇಬಲ್ ಸ್ಪೂನ್-ತುಪ್ಪ, 2 ಟೇಬಲ್ ಸ್ಪೂನ್ ಸಕ್ಕರೆ, 5 ಹನಿ-ಲಿಂಬೆಹಣ್ಣಿನ ರಸ, ಚಿಟಿಕೆ ಸ್ಪೂನ್ ಏಲಕ್ಕಿ ಪುಡಿ, 1 ಕಪ್ ಸಕ್ಕರೆ, ಕರಿಯಲು ಎಣ್ಣೆ.

ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಕಪ್ ಸಕ್ಕರೆ ಹಾಕಿ ½ ಕಪ್ ನೀರು ಹಾಕಿ ಪಾಕ ಬರಿಸಿಕೊಳ್ಳಿ. ಒಂದೆಳೆ ಪಾಕ ಬಂದರೆ ಸಾಕು. ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ. ನಂತರ ಒಂದು ಬೌಲ್ ಗೆ ಜಾಮೂನು ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಮೃದುವಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಎಣ್ಣೆ ಕಾಯಲು ಇಟ್ಟು ಜಾಮೂನು ಮಿಕ್ಸ್ ನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಳ್ಳಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಕಾಯಿಸಿಕೊಂಡು ಸಕ್ಕರೆ ಪಾಕಕ್ಕೆ ಹಾಕಿ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಬಿಡಿ.

ನಂತರ ಕೊಬ್ಬರಿ ತುರಿಗೆ 2 ಟೇಬಲ್ ಸ್ಪೂನ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿಕೊಂಡು ಸಕ್ಕರೆ ಪಾಕ ಹೀರಿದ ಜಾಮೂನುಗಳನ್ನು ಕೊಬ್ಬರಿ ತುರಿಯಲ್ಲಿ ಹೊರಳಾಡಿಸಿದರೆ ಡ್ರೈ ಜಾಮೂನು ಸವಿಯಲು ಸಿದ್ಧ.

Edited By : Nirmala Aralikatti
PublicNext

PublicNext

14/10/2021 02:50 pm

Cinque Terre

16.1 K

Cinque Terre

0