ನವರಾತ್ರಿ ದಿನಕ್ಕೊಂದು ಸಿಹಿ ಮಾಡಿ ತಾಯಿಗೆ ಅರ್ಪಣೆ ಮಾಡುವ ತಯಾರಿಯಲ್ಲಿದ್ರೆ ತೆಂಗಿನಕಾಯಿ ಲಡ್ಡು ತಯಾರಿಸಿ, ತಾಯಿಗೆ ನೈವೇದ್ಯ ಮಾಡಿ.
ಒಣಕೊಬ್ಬರಿ ಲಡ್ಡು ಮಾಡಲು ಬೇಕಾಗುವ ಪದಾರ್ಥ :
ಒಣ ಕೊಬ್ಬರಿ ತುರಿ – 3 ಕಪ್
ದೇಸಿ ತುಪ್ಪ – ಸ್ವಲ್ಪ
ಹಾಲು – ಒಂದು ಕಪ್
ಸಕ್ಕರೆ – ಒಂದು ಕಪ್
ಹಾಲಿನ ಪುಡಿ – ಒಂದು ಚಮಚ
ತೆಂಗಿನಕಾಯಿ ಲಡ್ಡು ಮಾಡುವ ವಿಧಾನ : ಒಂದು ಬಾಣಲಿಗೆ ಎರಡು ಚಮಚ ದೇಸಿ ತುಪ್ಪ ಹಾಕಿ. ಮಧ್ಯ ಗಾತ್ರದ 3 ಕಪ್ ತುರಿದ ಒಣಕೊಬ್ಬರಿಯನ್ನು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಒಂದರಿಂದ ಎರಡು ನಿಮಿಷ ಹುರಿದ ನಂತ್ರ ಒಂದುವರೆ ಕಪ್ ಹಾಲನ್ನು ಹಾಕಿ. ಹಾಲನ್ನು ಹುರಿದ ಕೊಬ್ಬರಿ ಹೀರಿಕೊಳ್ಳುವವರೆಗೂ ಬೇಯಿಸಿ. ಹುರಿದ ಒಣಕೊಬ್ಬರಿ ಸಂಪೂರ್ಣವಾಗಿ ಹಾಲನ್ನು ಹೀರಿಕೊಂಡ ನಂತರ ಇದಕ್ಕೆ ಒಂದು ಕಪ್ ಸಕ್ಕರೆ ಬೆರೆಸಿ. ತಳ ಹಿಡಿಯದಂತೆ ನಿರಂತರವಾಗಿ ಕದಡಿ.
ನಂತರ ಇದಕ್ಕೆ ಒಂದು ಚಮಚ ಮಿಲ್ಕ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಲಡ್ಡು ಮಾಡುವ ಹದಕ್ಕೆ ಬರುವವರೆಗೂ ಇದನ್ನು ಮಂದಗತಿಯಲ್ಲಿ ಬೇಯಿಸಿ. ನಂತರ ಉಂಡೆ ಮಾಡಿ ಒಣಕೊಬ್ಬರಿಯಲ್ಲಿ ಅದನ್ನು ಹೊರಳಾಡಿಸಿ.
PublicNext
09/10/2021 02:36 pm