ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಗಳು ಮುಖದ ಸೌಂದರ್ಯವನ್ನೇ ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಮನೆಯಲ್ಲಿ ಮಾಡಬಹುದಾದ ಮೂಗಿನ ಬ್ಲಾಕ್ ಹೆಡ್ ತೆಗೆಯಲು ಹಂತಗಳನ್ನು ವಿವರಿಸಿದ್ದೇವೆ.
ಫೇಸ್ ಸ್ಕ್ರಬ್ ನೊಂದಿಗೆ ಪ್ರಾರಂಭಿಸಿ
ನಿಮ್ಮ ಮೂಗಿನ ಮೇಲಿರುವ ಬ್ಲಾಕ್ ಹೆಡ್ಸ್ ತೆಗೆಯಲು ಮೊದಲಿಗೆ ಸೌಮ್ಯವಾದ ಎಕ್ಸ್ ಫೋಲಿಯೇಟಿಂಗ್ ಫೇಸ್ ಸ್ಕ್ರಬ್ ಬಳಸಿ. ನಿಮ್ಮ ತ್ವಚೆಗೆ ಸರಿಹೊಂದುವಂತಹ ಸ್ಕ್ರಬ್ ಆಯ್ಕೆಮಾಡಿಕೊಂಡು, ಅದನ್ನು ಮೂಗಿನ ಮೇಲೆ ಹಚ್ಚಿನ, ಮೇಲ್ಮುಖ ಚಲನೆಯಲ್ಲಿ ನಿಮ್ಮ ಮೂಗಿನ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಡೆಡ್ ಸೆಲ್ ಗಳು ಹಾಗೂ ಬ್ಲ್ಯಾಕ್ ಹೆಡ್ಗಳೆಲ್ಲವೂ ದೂರವಾಗಿ, ಒರಟುತನವು ಕಡಿಮೆಯಾಗುತ್ತದೆ.
ಮುಖಕ್ಕೆ ಸ್ಟೀಮ್ ನೀಡಿ
ನಿಮ್ಮ ಮುಖವನ್ನು ನಿಧಾನವಾಗಿ ಉಜ್ಜಿದ ನಂತರ ಅದನ್ನು ಒದ್ದೆಯಾದ ಟಿಸ್ಯು ಪೇಪರ್ ನಿಂದ ಒರೆಸಿ ನಂತರ ಮುಖದ ಸ್ಟೀಮರ್ ಬಳಸಿ. ಈ ಬಿಸಿ ಹಬೆಯು ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದರಿಂದ ಬ್ಲ್ಯಾಕ್ ಹೆಡ್ ತೆಗದುಹಾಕಲು ಸುಲಭವಾಗುತ್ತದೆ.
ಟೂಲ್ ಮೂಲಕ ಬ್ಲ್ಯಾಕ್ ಹೆಡ್ಸ್ ತೆಗೆಯಿರಿ
ಸ್ಟೀಮರ್ ಆನ್ ಇರುವಾಗ, ಬ್ಲ್ಯಾಕ್ ಹೆಡ್ ತೆಗೆಯುವ ಉಪಕರಣವನ್ನು ಬಳಸಿ ಬ್ಲ್ಯಾಕ್ ಹೆಡ್ಸ್ ಮತ್ತು ಡೆಡ್ ಸೆಲ್ಗಳನ್ನು ತೆಗೆಯಿರಿ. ಈ ಉಪಕರಣವು ಕಪ್ಪು ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಬ್ಲಾಕ್ ಹೆಡ್ಸ್ ತೆಗೆದ ನಂತರ, ಅದನ್ನು ಒದ್ದೆಯಾದ ಬಟ್ಟೆಯಿಂದ ಅಥವಾ ಒದ್ದೆಯಾದ ಟಿಸ್ಯು ಪೇಪರ್ ನಿಂದ ಸ್ವಚ್ಛಗೊಳಿಸಿ.
ಮಣ್ಣಿನ ಅಥವಾ ಕ್ಲೇ ಫೇಸ್ ಪ್ಯಾಕ್ ಹಾಕಿ
ಒಮ್ಮೆ ನೀವು ಬ್ಲ್ಯಾಕ್ ಹೆಡ್ಸ್ ತೆಗೆದು ಮುಗಿಸಿದ ನಂತರ, ಕ್ಲೆನ್ಸಿಂಗ್ ಕ್ಲೇ ಫೇಸ್ ಪ್ಯಾಕ್ ಹಾಕಿಕೊಳ್ಳಿ. ಇದನ್ನು ನಿಮ್ಮ ಸಂಪೂರ್ಣ ಮುಖದ ಮೇಲೆ ಅಥವಾ ನಿಮ್ಮ ಮೂಗಿನ ಮೇಲೆ ಹಚ್ಚಿಕೊಳ್ಳಬಹುದು. ಈ ಫೇಸ್ ಪ್ಯಾಕ್ ಮುಖದ ಹೆಚ್ಚುವರಿ ಎಣ್ಣೆಯನ್ನು ಹೊರತೆಗೆದು, ದೈನಂದಿನ ಮಾಲಿನ್ಯಕಾರಕಗಳಿಂದ ರಕ್ಷಿಸುತ್ತದೆ, ಇದರ ಪರಿಣಾಮವಾಗಿ ತ್ವಚೆಯು ಸ್ಪಷ್ಟವಾಗಿ ಕಾಣುತ್ತದೆ.
ಮಾಯಿಶ್ಚರೈಸರ್ ಬಳಸಿ ಮುಗಿಸಿ
ಫೇಸ್ ಮಾಸ್ಕನ್ನು 10 ನಿಮಿಷಗಳ ಕಾಲ ಬಿಡಿ, ನಂತರ ಉಗುರುಬೆಚ್ಚಗಿನ ನೀರು ಅಥವಾ ಒದ್ದೆಯಾದ ಬಟ್ಟೆಯಿಂದ ತೊಳೆಯಿರಿ. ಎಣ್ಣೆ ರಹಿತ ಮಾಯಿಶ್ಚರೈಸರ್ ಹಚ್ಚುವ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಮುಗಿಸಿ. ಈಮೂಲಕ ನಿಮ್ಮ ಬ್ಲಾಕ್ ಹೆಡ್ಸ್ ಗಳನ್ನು ಸುಲಭವಾಗಿ ಮನೆಯಲ್ಲಿಯೇ ತೆಗೆಯಬಹುದು.
PublicNext
27/09/2021 06:48 pm