ಬೇಕಾಗುವ ಸಾಮಾಗ್ರಿಗಳು:
2 ಕಪ್ -ಕ್ಯಾಬೇಜ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಮೈದಾ ಹಿಟ್ಟು -1 ಕಪ್, ಕಡಲೇ ಹಿಟ್ಟು -3 ಟೇಬಲ್ ಸ್ಪೂನ್, ಹಸಿಮೆಣಸು -ಸಣ್ಣದ್ದಾಗಿ ಹಚ್ಚಿಕೊಂಡಿದ್ದು-2, 1 ಟೀ ಸ್ಪೂನ್ – ಗರಂ ಮಸಾಲಾ, ಕೊತ್ತಂಬರಿ ಸೊಪ್ಪು -1/4 ಕಪ್, ರೆಡ್ ಫುಡ್ ಕಲರ್ -ಚಿಟಿಕೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ -1 ಟೇಬಲ್ ಸ್ಪೂನ್, ಖಾರದ ಪುಡಿ -2 ಟೀ ಸ್ಪೂನ್, ಉಪ್ಪು -ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಕ್ಯಾಬೇಜ್, ಹಸಿಮೆಣಸು, ಖಾರದ ಪುಡಿ, ಫುಡ್ ಕಲರ್, ಗರಂ ಮಸಾಲ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ನಂತರ 5 ಟೇಬಲ್ ಸ್ಪೂನ್ ಮೈದಾ ಹಿಟ್ಟು, ಕಡಲೇ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕರಿಯಿರಿ. ಸಾಸ್ ಜತೆ ಸವಿಯಿರಿ.
PublicNext
21/09/2021 07:05 pm