ಪನ್ನೀರ್ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ:
250 ಗ್ರಾಂ ಪನ್ನೀರ್, 2 ದೊಡ್ಡ ಚಮಚ ಟೊಮೊಟೋ ಸಾಸ್, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಕೆಂಪು ಮೆಣಸಿನ ಪುಡಿ, ¼ ಚಮಚ ಓರೆಗಾನೊ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಯಲು ಎಣ್ಣೆ.
ಪನ್ನೀರ್ ಟಿಕ್ಕಾ ಮಾಡುವ ವಿಧಾನ:
ಮೊದಲು ಪನ್ನೀರನ್ನು ಚೌಕವಾಗಿ ಕತ್ತರಿಸಿಕೊಳ್ಳಿ. ನಂತ್ರ ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ. ನಂತ್ರ ಟೊಮೊಟೋ ಸಾಸ್, ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ. ಇದಕ್ಕೆ ಕತ್ತರಿಸಿದ ಪನ್ನೀರ್ ಹಾಕಿ ಸರಿಯಾಗಿ ಬೇಯಿಸಿ. ಕೊನೆಯಲ್ಲಿ ಓರೆಗಾನೊ ಹಾಕಿದ್ರೆ ಮುಗೀತು. ಪನ್ನೀರ್ ಟಿಕ್ಕಾ ಸಿದ್ಧ.
PublicNext
31/08/2021 01:46 pm