ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು ಶೈಲಿಯ ರುಬ್ಬಿದ ಮಸಾಲೆಯ ಮೊಟ್ಟೆ ಬುರ್ಜಿ ಮಾಡುವ ವಿಧಾನ

ಮೊಟ್ಟೆಯಲ್ಲಿ ಹೆಚ್ಚಾಗಿ ಮಾಡಲಾಗುವ ಬಗೆಯೆಂದರೆ ಅದು ಒಮ್ಲೆಟ್ ಅಥವಾ ಬುರ್ಜಿ. ಯಾಕೆಂದರೆ ಇವೆರಡಕ್ಕಿಂತ ಸುಲಭವಾದ ಮೊಟ್ಟೆ ಬಗೆ ಬೇರೊಂದಿಲ್ಲ. ಅಷ್ಟೇ ಅಲ್ಲ, ಮೊಟ್ಟೆ ಬುರ್ಜಿ ಅಥವಾ ಒಮ್ಲೆಟ್ ಥಟ್ಟನೆ ಮಾಡಬಹುದಾಗಿದ್ದು, ಜೋರಾಗಿ ಹೊಟ್ಟೆ ಹಸಿವಾದಾಗ, ಮನೆಯಲ್ಲಿ ಬೇರೇನೂ ತರಕಾರಿಗಳಿರದೇ ಬರೇ ಮೊಟ್ಟೆ ಮಾತ್ರ ಕಣ್ಣಿಗೆ ತೋರಿದಾಗ ಮೊದಲು ತೋಚುವುದೇ ಇವೆರಡು ತಿನಿಸು ಒಮ್ಲೆಟ್ ಮತ್ತು ಬುರ್ಜಿ. ಇವತ್ತಿನ ನಮ್ಮ ರೆಸಿಪಿಯು ಇದರಲ್ಲೇ ಒಂದು-ಮೊಟ್ಟೆ ಬುರ್ಜಿ! ಆದರೆ ಈ ಬುರ್ಜಿಯಲ್ಲಿ ಚಿಕ್ಕದೊಂದು ವ್ಯತ್ಯಾಸವಿದೆ.

ಸಾಮಾನ್ಯವಾಗಿ ಬುರ್ಜಿ ಎಂದರೆ ಕಡಿಮೆಯಲ್ಲಿ ಕಡಿಮೆ ಸಾಮಗ್ರಿಗಳನ್ನು ಅಥವಾ ಮಸಾಲೆ ಪುಡಿಗಳನ್ನು ಹಾಕಿ ಮಾಡಲಾಗುತ್ತದೆ. ಆದರೆ ನಮ್ಮ ಕರಾವಳಿಯ ಪಾರಂಪರಿಕ ಅಡುಗೆ ವಿಧಾನಗಳ ಕಡೆ ಒಮ್ಮೆ ಗಮನ ಹರಿಸಿದರೆ ತಿಳಿಯುತ್ತದೆ. ಮೊಟ್ಟೆ ಬುರ್ಜಿಯಲ್ಲಿಯೂ ಕಾಯಿ ತುರಿ ಮತ್ತು ಸಾಂಬಾರು ಜಿನಸುಗಳನ್ನು ರುಬ್ಬಿ, ಮಸಾಲೆ ತಯಾರು ಮಾಡಿ ನಂತರ ಅದರಲ್ಲಿ ಮೊಟ್ಟೆ ಒಡೆದು ಹಾಕಿ ಬುರ್ಜಿ ಮಾಡಲಾಗುತ್ತದೆ. ಹೌದು, ಕರಾವಳಿಯ ಅಡುಗೆಗೆ ಅದರದ್ದೇ ಆದ ಶೈಲಿ ಇದೆ. ಇವತ್ತು ನಾವು ಕರಾವಳಿ ಶೈಲಿಯ ಮೊಟ್ಟೆ ಬುರ್ಜಿ ಮಾಡುವ ವಿಧಾನ ತಿಳಿಯೋಣ.

Edited By : Vijay Kumar
PublicNext

PublicNext

25/08/2021 11:58 am

Cinque Terre

37.02 K

Cinque Terre

1