ಕಾಯಿ ಗೆಣಸಲೆ ಒಂದು ಸಾಂಪ್ರದಾಯಿಕವಾದ ತೆಂಗಿನಕಾಯಿ-ಬೆಲ್ಲದ ಮಿಶ್ರಣದಿಂದ ತುಂಬಿಸಿ ಬಾಳೆ ಎಲೆಗಳಿಂದ ಸುತ್ತಿ ಹಬೆಯಲ್ಲಿ ಬೇಯಿಸಿ ಮಾಡುವಂತಹ ಒಂದು ತಿನಿಸು. ಕಾಯಿ ಗೆಣಸಲೆ ಎನ್ನುವ ಹೆಸರು ಕರಾವಳಿ ಪ್ರಾಂತ್ಯದಲ್ಲಿ ಅಂದರೆ ಕುಂದಾಪುರ, ಉಡುಪಿ ಮತ್ತಿರರ ಪ್ರದೇಶಗಳಲ್ಲಿ ಪ್ರಚಲಿತವಾಗಿರುವಂತಹ ಹೆಸರು. ಇದೇ ಸಿಹಿ ತಿನಿಸಿಗೆ ಬಾಳೆ ಎಲೆ ಬದಲು ಅರಸಿನ ಎಲೆಯನ್ನು ಉಪಯೋಗಿಸಿದಲ್ಲಿ ಇದು ಪಾತೊಳಿ ಎಂದು ಕರೆಯಲ್ಪಡುತ್ತದೆ. ಒಂದು ಆರೋಗ್ಯಕರವಾದ ತಿನಿಸು.ಹಬ್ಬ-ಹರಿದಿನಗಳಂದೂ ಮಾಡಬಹುದು. ಅಷ್ಟೇ ಅಲ್ಲ ಬೆಳಗಿನ ಉಪಾಹಾರಕ್ಕೂ ಕೂಡ ಮಾಡಿ ತುಪ್ಪದೊಂದಿಗೆ ಬಡಿಸಬಹುದು. ಈ ಸುಲಭ, ಆರೋಗ್ಯಕರವಾದ ಮತ್ತು ಅಷ್ಟೇ ರುಚಿಕರವಾದ ಕಾಯಿ ಗೆಣಸಲೆ ಒಮ್ಮೆ ಮಾಡಿ ನೋಡಲೇಬೇಕಾದ ತಿನಿಸು. ನೀವು ಕೂಡ ಪ್ರಯತ್ನಿಸಿ ನೋಡಿ!
PublicNext
13/08/2021 01:52 pm